ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಲ್ಲಿ ಜೆಇಎಂ, ಎಲ್‌ಇಟಿ ತರಬೇತಿ ಶಿಬಿರ: ವಿಶ್ವಸಂಸ್ಥೆ ವರದಿ

Last Updated 30 ಮೇ 2022, 10:32 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: 26/11ರ ಮುಂಬೈ ದಾಳಿಯ ಸೂತ್ರಧಾರ ಪಾಕಿಸ್ತಾನದ ಹಫೀಜ್‌ ಸಯೀದ್‌ ನೇತೃತ್ವದ ಜೈಷ್‌ ಎ ಮೊಹಮ್ಮದ್‌ (ಜೆಇಎಂ) ಮತ್ತು ಲಷ್ಕರ್‌ ಎ ತಯಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಗಳು ಅಫ್ಗಾನಿಸ್ತಾನದ ಕೆಲವು ಪ್ರಾಂತ್ಯಗಳಲ್ಲಿ ತರಬೇತಿ ಶಿಬಿರಗಳನ್ನು ನಿರ್ವಹಿಸುತ್ತಿವೆ ಮತ್ತು ಇವುಗಳಲ್ಲಿ ಕೆಲವು ತಾಲಿಬಾನ್‌ನ ನಿಯಂತ್ರಣದಲ್ಲಿವೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

ತಾಲಿಬಾನ್‌ಗೆ ಸೈದ್ಧಾಂತಿಕವಾಗಿ ಹತ್ತಿರವಿರುವ ಜೆಇಎಂ ಸಂಘಟನೆಯು ನಂಗರ್‌ಹಾರ್‌ನಲ್ಲಿ ಎಂಟು ತರಬೇತಿ ಶಿಬಿರಗಳನ್ನು ನಿರ್ವಹಿಸುತ್ತಿದೆ. ಇವುಗಳಲ್ಲಿ ಮೂರು ಶಿಬಿರಗಳು ತಾಲಿಬಾನ್‌ನ ಅಧೀನದಲ್ಲಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್‌.ತಿರುಮೂರ್ತಿ ಅಧ್ಯಕ್ಷರಾಗಿರುವ ತಾಲಿಬಾನ್‌ ನಿರ್ಬಂಧ ಸಮಿತಿಯು ಈ ವರದಿಯನ್ನು ಭದ್ರತಾ ಮಂಡಳಿಯ ಸದಸ್ಯರ ಗಮನಕ್ಕೆ ತರಲು ರವಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT