ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಡ್ರೋನ್‌ ಹೊಡೆದುರುಳಿಸಿದ ಸೇನೆ

Last Updated 4 ಫೆಬ್ರುವರಿ 2023, 15:39 IST
ಅಕ್ಷರ ಗಾತ್ರ

ನವದೆಹಲಿ/ಜೈಪುರ: ರಾಜಸ್ಥಾನದ ಅಂತರರಾಷ್ಟ್ರೀಯ ಗಡಿಯಲ್ಲಿ ಸುಮಾರು 6 ಕೆ.ಜಿ ಮಾದಕ ವಸ್ತುವನ್ನು ಹೊತ್ತು ಸಾಗುತ್ತಿದ್ದ ಪಾಕಿಸ್ತಾನದ ಡ್ರೋನ್‌ ಅನ್ನು ಗಡಿ ಭದ್ರತಾ ಪಡೆಯು ಹೊಡೆದುರುಳಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಶ್ರೀಗಂಗಾನಗರ ಸೆಕ್ಟರ್‌ನ ಶ್ರೀಕರಣಪುರ ಪ್ರದೇಶದಲ್ಲಿ ಫೆ.3ರ ಮಧ್ಯರಾತ್ರಿ ದಾಳಿ ನಡೆದಿದ್ದು, ಪಾಕಿಸ್ತಾನದ ಡ್ರೋನ್‌ ಮತ್ತು ಡ್ರಗ್ಸ್‌ ಇದ್ದ ಎರಡು ಬ್ಯಾಗನ್ನು ವಶಕ್ಕೆ ಪಡೆಯಲಾಗಿದೆ’ ಎಂದು ವಕ್ತಾರರು ತಿಳಿಸಿದ್ದಾರೆ.

ಶುಕ್ರವಾರವೂ ಪಂಜಾಬ್‌ನಲ್ಲಿ 5 ಕೆ.ಜಿ ಮಾದಕ ವಸ್ತು ಹೊತ್ತೊಯ್ಯುತ್ತಿದ್ದ ಡ್ರೋನ್‌ ಅನ್ನು ಹೊಡೆದುರುಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT