ಬುಧವಾರ, ಡಿಸೆಂಬರ್ 8, 2021
27 °C

ಸೆ.7 ರಿಂದ ತಮಿಳುನಾಡಿನಲ್ಲಿ ರೈಲು, ಬಸ್ ಸೇವೆ ಆರಂಭ: ಪಳನಿಸ್ವಾಮಿ

ಪಿಟಿಐ Updated:

ಅಕ್ಷರ ಗಾತ್ರ : | |

palaniswami

ಚೆನ್ನೈ: ಸೆಪ್ಟೆಂಬರ್ 7ನೇ ತಾರೀಖಿನಿಂದ ತಮಿಳುನಾಡಿನಲ್ಲಿ ಪ್ಯಾಸೆಂಜರ್ ರೈಲು ಮತ್ತು ಅಂತರ್ ಜಿಲ್ಲಾ ಬಸ್ ಸೇವೆ ಆರಂಭಿಸುವುದಾಗಿ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಬುಧವಾರ ಹೇಳಿದ್ದಾರೆ.

ಈಗ ಜಿಲ್ಲೆಗಳಲ್ಲಿ ಬಸ್ ಸಂಚಾರ ನಡೆಸುತ್ತಿದ್ದು, ಅಂತರ್ ಜಿಲ್ಲಾ ಬಸ್ ಸೇವೆ ಬೇಕು ಎಂದು ಜನರು ಕೇಳುತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಪರಿಗಣಿಸಿ, ಮಾರ್ಗಸೂಚಿ ಅನುಸರಿಸಿಕೊಂಡು ತಮಿಳುನಾಡು ರಾಜ್ಯದಾದ್ಯಂತ ಖಾಸಗಿ ಮತ್ತು ಸರ್ಕಾರಿ ಬಸ್‌ಗಳ ಸೇವೆ ಆರಂಭವಾಗಲಿದೆ ಎಂದು ಪಳನಿಸ್ವಾಮಿ ಹೇಳಿಕೆ ನೀಡಿದ್ದಾರೆ.

ಅದೇ ವೇಳೆ ಪ್ಯಾಸೆಂಜರ್ ರೈಲು ಸೇವೆಯೂ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ. ನಿರ್ದಿಷ್ಟ ಮಾರ್ಗಗಳಲ್ಲಿ ಈಗಾಗಲೇ ಅಂತರ್ ರಾಜ್ಯ ರೈಲು ಸೇವೆ ಇದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು