ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಕಾರ್ಮಿಕ ಸುಧಾರಣೆ ಮಸೂದೆಗಳಿಗೆ ಅಸ್ತು

ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕಾರ
Last Updated 23 ಸೆಪ್ಟೆಂಬರ್ 2020, 9:59 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಸಭಾತ್ಯಾಗ, ಗದ್ದಲದ ನಡುವೆ ಬುಧವಾರ ರಾಜ್ಯಸಭೆಯಲ್ಲಿ ಮೂರು ಪ್ರಮುಖ ಕಾರ್ಮಿಕ ಸುಧಾರಣಾ ಮಸೂದೆಗಳಿಗೆ ಧ್ವನಿಮತದ ಮೂಲಕ ಅನುಮೋದನೆ ನೀಡಲಾಯಿತು.

'ಕೈಗಾರಿಕಾ ವ್ಯವಹಾರಗಳ ಮಾರ್ಗದರ್ಶಿ ವಿಧೇಯಕ, ಸಾಮಾಜಿಕ ಸುರಕ್ಷತಾ ಮಾರ್ಗದರ್ಶಿ ವಿಧೇಯಕ ಹಾಗೂ ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ವಾತಾವರಣ ಮಾರ್ಗದರ್ಶಿ ವಿಧೇಯಕಗಳಿಗೆ ರಾಜ್ಯಸಭೆ ಅಂಗೀಕಾರ ನೀಡಿತು. ಮಂಗಳವಾರ ಈ ಮೂರು ಮಸೂದೆಗಳಿಗೆ ಲೋಕಸಭೆ ಅನುಮೋದನೆ ನೀಡಿತ್ತು. ಈ ಮಸೂದೆಯನ್ನು ರಾಷ್ಟ್ರಪತಿ ಒಪ್ಪಿಗೆಗಾಗಿ ಕಳಹಿಸಲಾಗುತ್ತದೆ.

ಮೂರು ಮಸೂದೆಗಳ ಮಂಡನೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಗಾಂಗ್ವಾರ್, ‘ ವ್ಯಾಪಾರ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗೆ ತಕ್ಕಂತೆ ಸೂಕ್ತ ಪಾರದರ್ಶಕ ವ್ಯವಸ್ಥೆಯನ್ನು ರೂಪಿಸುವುದಕ್ಕಾಗಿ ಕಾರ್ಮಿಕ ಕಾಯ್ದೆಗಳಿಗೆ ಸುಧಾರಣೆ ತರಲಾಗುತ್ತಿದೆ‘ ಎಂದು ತಿಳಿಸಿದರು. ‘ಈಗಾಗಲೇ ದೇಶದ 16 ರಾಜ್ಯಗಳಲ್ಲಿ ಮುನ್ನೂರಕ್ಕಿಂತ ಕಡಿಮೆ ಉದ್ಯೋಗಿಗಳಿರುವ ಕಂಪನಿಗಳನ್ನು ಸರ್ಕಾರದ ಅನುಮತಿ ಪಡೆಯದೇ ಮುಚ್ಚುವ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದ ಉದ್ಯೋಗ ಸೃಷ್ಟಿಗೆ ಉತ್ತೇಜನ ಸಿಗಲಿದೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT