ಶುಕ್ರವಾರ, ಡಿಸೆಂಬರ್ 4, 2020
22 °C

ಕೋವಿಡ್: ಸಂಸತ್ತಿನ ಚಳಿಗಾಲದ ಅಧಿವೇಶನ ಮುಂದೂಡಿಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಏರುತ್ತಿರುವ ಕಾರಣದಿಂದಾಗಿ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಮುಂದಿನ ವರ್ಷಾರಂಭಕ್ಕೆ ಮುಂದೂಡುವ ಸಂಭವವಿದೆ. ಅಥವಾ ಬಜೆಟ್‌ ಅಧಿವೇಶನದ ಜೊತೆಗೆ ವಿಲೀನಗೊಳಿಸುವ ಸಂಭವವೂ ಇದೆ.

‘ನಮ್ಮ ಎದುರು ಹಲವು ಆಯ್ಕೆಗಳಿವೆ. ಸಂಸದೀಯ ವ್ಯವಹಾರಗಳ ಸಂಪುಟ ಉಪ ಸಮಿತಿ ಈ ಕುರಿತು ತೀರ್ಮಾನಿಸಲು ಶೀಘ್ರವೇ ಸಭೆ ಸೇರಲಿದೆ’ ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದರು. ರಾಜಧಾನಿಯಲ್ಲಿ ಕೋವಿಡ್‌ ಪ್ರಕರಣಗಳು ತೀವ್ರವಾಗಿ ಏರುತ್ತಿದ್ದು, ನವೆಂಬರ್ 1ರಿಂದ ನಿತ್ಯ ಸರಾಸರಿ 6,800 ಪ್ರಕರಣಗಳು ವರದಿ ಆಗುತ್ತಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು