ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆ ಕಡೆಯ ಅಜ್ಜ–ಅಜ್ಜಿಯರೇ ಮೊಮ್ಮಗನನ್ನು ಚೆನ್ನಾಗಿ ನೋಡಿಕೊಳ್ಳುವರು: ‘ಸುಪ್ರೀಂ’

Last Updated 9 ಜೂನ್ 2022, 19:32 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ನಿಂದಾಗಿ ಪಾಲಕರನ್ನು ಕಳೆದುಕೊಂಡು ಅನಾಥನಾಗಿರುವ ಬಾಲಕನನ್ನು ಆತನ ತಂದೆಯ ತಂದೆ–ತಾಯಿಗೇ ಒಪ್ಪಿಸುವಂತೆ ಸುಪ್ರೀಂಕೋರ್ಟ್‌ ಗುರುವಾರ ನಿರ್ದೇಶನ ನೀಡಿದೆ.

‘ಬಾಲಕ ಸದ್ಯ ತನ್ನ ತಾಯಿಯ ಸಂಬಂಧಿ (ಚಿಕ್ಕಮ್ಮ) ಬಳಿ ಇದ್ದಾನೆ. ಚಿಕ್ಕಮ್ಮ ಆ ಬಾಲಕನನ್ನು ಬಹಳ ಪ್ರೀತಿಯಿಂದ ಸಲಹುತ್ತಿರಬಹುದು. ಆದರೆ, ತಂದೆಯ ತಂದೆ–ತಾಯಿಗಳೇ ಮೊಮ್ಮಗನನ್ನು ಚೆನ್ನಾಗಿ ನೋಡಿಕೊಳ್ಳಬಲ್ಲರು’ ಎಂದು ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಹಾಗೂ ಅನಿರುದ್ಧ ಬೋಸ್‌ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿತು.

‘ಬಾಲಕ, ರಜಾಕಾಲದಲ್ಲಿ ಅಥವಾ ತನಗೆ ಬಯಸಿದಾಗ ಚಿಕ್ಕಮ್ಮನನ್ನು ಭೇಟಿ ಮಾಡಬಹುದು. ಈ ವ್ಯವಸ್ಥೆ ಆತನ ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಅಡ್ಡಿಯಾಗಬಾರದು’ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿತು.

ಕೋವಿಡ್‌ನ ಎರಡನೇ ಅಲೆ ಸಂದರ್ಭದಲ್ಲಿ 6 ವರ್ಷದ ಬಾಲಕನ ತಂದೆ–ತಾಯಿ ಮೃತಪಟ್ಟಿದ್ದರು. ಬಾಲಕನ ಪಾಲನೆ–ಪೋಷಣೆ ವಿಷಯ ಕೋರ್ಟ್‌ ಮೆಟ್ಟಿಲೇರಿತ್ತು. ಬಾಲಕನನ್ನು ಚಿಕ್ಕಮ್ಮನ ಸುಪರ್ದಿಗೆ ನೀಡುವಂತೆ ಗುಜರಾತ್‌ ಹೈಕೋರ್ಟ್‌ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ, ಬಾಲಕನ 71 ವರ್ಷದ ಅಜ್ಜ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT