ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿಸ್ತಾನ ಪರ ಹೋರಾಟಗಾರ ಅಮೃತ್‌ಪಾಲ್‌ಗೆ ಆಶ್ರಯ: ಪಟಿಯಾಲ ಮಹಿಳೆ ಬಂಧನ

Last Updated 26 ಮಾರ್ಚ್ 2023, 8:52 IST
ಅಕ್ಷರ ಗಾತ್ರ

ಚಂಡೀಗಢ: ಖಾಲಿಸ್ತಾನದ ಪರ ಮುಂದಾಳು ಅಮೃತ್‌ಪಾಲ್‌ ಸಿಂಗ್‌ ಮತ್ತು ಆತನ ಸಹಚರನಿಗೆ ಆಶ್ರಯ ನೀಡಿದ ಆರೋಪದ ಮೇಲೆ ಪಟಿಯಾಲದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ‍ಪೊಲೀಸ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಪಟಿಯಾಲದ ಹರ್‌ಗೋಬಿಂದ್ ನಗರದ ಬಲ್‌ಬೀರ್ ಕೌರ್ ಅವರು ತಮ್ಮ ನಿವಾಸದಲ್ಲಿ ಅಮೃತ್‌ಪಾಲ್‌ ಮತ್ತು ಸಹಚರ ಪಾಪಲ್‌ಪ್ರೀತ್‌ ಸಿಂಗ್ ಅವರಿಗೆ ಮಾರ್ಚ್‌ 19ರಂದು ಆಶ್ರಯ ನೀಡಿದ್ದರು. ಅಮೃತ್‌ಪಾಲ್ ಹರಿಯಾಣಕ್ಕೆ ತೆರಳುವ 6 ಗಂಟೆಗಳ ಮೊದಲು ಕೌರ್ ಅವರ ನಿವಾಸದಲ್ಲಿದ್ದರು ಎಂದು ಹೇಳಿದ್ದಾರೆ.

ಈ ನಡುವೆ ಶನಿವಾರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಅಮೃತ್‌ಪಾಲ್‌ರದ್ದು ಎನ್ನಲಾದ ದೃಶ್ಯವೊಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅದರಲ್ಲಿ ಜಾಕೆಟ್ ಧರಿಸಿರುವ ಅಮೃತ್‌ಪಾಲ್‌ ರಸ್ತೆಯಲ್ಲಿ ಅತ್ತಿಂದಿತ್ತ ತಿರುಗಾಡುತ್ತಾ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾರೆ.

ಮಾರ್ಚ್‌ 18ರಿಂದ ಪಂಜಾಬ್ ಪೊಲೀಸರು ಅಮೃತ್‌ಪಾಲ್‌ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT