ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ರೋಗಿಗಳ ’ಗಾರ್ಬಾ’ ನೃತ್ಯ

ನವರಾತ್ರಿ ಉತ್ಸವದಲ್ಲಿ ದಾಂಡಿಯಾ ಬದಲು ಆರೋಗ್ಯ ಶಿಬಿರ ಮಾಡಿ ಎಂದಿದ್ದ ಮಹಾರಾಷ್ಟ್ರ ಸರ್ಕಾರ
Last Updated 20 ಅಕ್ಟೋಬರ್ 2020, 7:19 IST
ಅಕ್ಷರ ಗಾತ್ರ

ಮುಂಬೈ: ಮಹಾನಗರ ಪಾಲಿಕೆ ತೆರೆದಿರುವ ಕೋವಿಡ್‌ 19 ಸೇವಾ ಕೇಂದ್ರವೊಂದರಲ್ಲಿ ಇಬ್ಬರು ರೋಗಿಗಳು ’ಗಾರ್ಬಾ’ ನೃತ್ಯ ಪ್ರದರ್ಶಿಸಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಆ ವಿಡಿಯೊದಲ್ಲಿ ಮಾಸ್ಕ ಧರಿಸಿರುವ ಕೋವಿಡ್ ರೋಗಿಗಳು, ಪಿಪಿಇ ಕಿಟ್‌ ಧರಿಸಿರುವ ಆರೋಗ್ಯ ಕಾರ್ಯಕರ್ತರೊಂದಿಗೆ ಸೇರಿ ಬಾಲಿವುಡ್‌ ಹಾಡೊಂದಕ್ಕೆ ನೃತ್ಯ ಮಾಡುತ್ತಿರುವ ದೃಶ್ಯವಿದೆ. ಕೆಲವು ಮಹಿಳಾ ರೋಗಿಗಳು ಈ ನೃತ್ಯವನ್ನು ವೀಕ್ಷಿಸುತ್ತಿರುವ ತುಣಕುಗಳಿವೆ. ಮತ್ತೊಂದು ವಿಡಿಯೊದಲ್ಲಿ ಕೆಲವು ಪುರುಷ ರೋಗಿಗಳು, ಪಿಪಿಇ ಕಿಟ್‌ ಧರಿಸಿರುವ ಆರೋಗ್ಯ ಸೇವಾ ಕಾರ್ಯಕರ್ತರೊಂದಿಗೆ ’ನರ್ಸಿಂಗ್ ಸ್ಟೇಷನ್‌ 15’ ಎಂಬಲ್ಲಿ ’ಗಾರ್ಬಾ’ ನೃತ್ಯ ಮಾಡುತ್ತಿರುವ ದೃಶ್ಯವಿದೆ.

ಸಾಮಾಜಿಕ ಜಾಲತಾಣದಲ್ಲಿರುವ ಪೋಸ್ಟ್‌ನ ಮಾಹಿತಿ ಪ್ರಕಾರ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ನ‌ (ಬಿಎಂಸಿ) ಗೋರೆಗಾಂವ್‌ ಮೂಲದ ಜಂಬೊ ಕೋವಿಡ್‌ 19 ಆರೈಕೆ ಕೇಂದ್ರದಲ್ಲಿ ಈ ನೃತ್ಯ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗಷ್ಟೇ ಮಹಾರಾಷ್ಟ್ರ ಸರ್ಕಾರ, ನವರಾತ್ರಿ ಹಬ್ಬದ ಅವಧಿಯಲ್ಲಿ ’ದಾಂಡಿಯಾ’ ನೃತ್ಯ ಕಾರ್ಯಕ್ರಮಗಳ ಬದಲಾಗಿ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಬೇಕೆಂದು ಮನವಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT