ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್: ಮಧ್ಯಾಹ್ನದ ಬಿಸಿಯೂಟದ ಅಡುಗೆ ಸಹಾಯಕರ ವೇತನ ₹2000ಕ್ಕೆ ಹೆಚ್ಚಳ

Last Updated 17 ಫೆಬ್ರುವರಿ 2021, 5:29 IST
ಅಕ್ಷರ ಗಾತ್ರ

ರಾಂಚಿ: ‘ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಸಿದ್ಧಪಡಿಸುವ ಅಡುಗೆ ಸಹಾಯಕರ ವೇತನವನ್ನು ₹500 ಹೆಚ್ಚಿಸಲು ಜಾರ್ಖಂಡ್ ಸರ್ಕಾರ ನಿರ್ಧರಿಸಿದೆ’ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು.

‘ಜಾರ್ಖಂಡ್‌ನ 79,551 ಅಡುಗೆ ಸಹಾಯಕರಿಗೆ ಪ್ರತಿ ತಿಂಗಳು ತಲಾ ₹2000 ನೀಡಲಾಗುವುದು. ವೇತನ ಹೆಚ್ಚಳವು 2020ರ ಏಪ್ರಿಲ್‌ 1ರಿಂದಲೇ ಅನ್ವಯವಾಗಲಿದೆ ಎಂದು ಅವರು ಹೇಳಿದರು.

ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಅವರು ಪರಿಷ್ಕೃತ ವೇತನಕ್ಕಾಗಿ ₹39.79 ಕೋಟಿ ಅನುಮೋದಿಸಿದ್ದಾರೆ.

‘ಕೇಂದ್ರದ ಈ ಯೋಜನೆಯಡಿ ಅಡುಗೆ ಸಹಾಯಕರಿಗೆ 10 ತಿಂಗಳವರೆಗೆ ಪ್ರತಿ ತಿಂಗಳು ₹1000 ಸಿಗುತ್ತಿತ್ತು. ಇದರಲ್ಲಿ ಶೇ 60ರಷ್ಟು ಪಾಲುಕೇಂದ್ರ ಸರ್ಕಾರದ್ದಾಗಿದ್ದರೆ, ಶೇ 40ರಷ್ಟು ಪಾಲು ರಾಜ್ಯ ಸರ್ಕಾರದ್ದಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಹಿಂದೆಯೂ ಜಾರ್ಖಂಡ್‌ ಸರ್ಕಾರ ₹500 ಅನ್ನು ಹೆಚ್ಚಳ ಮಾಡಿತ್ತು. ಇದೀಗ ಮತ್ತೆ ₹500 ಏರಿಕೆ ಮಾಡಿದೆ. ಹೀಗಾಗಿ ಅಡುಗೆ ಸಹಾಯಕರ ವೇತನ ₹2000ಕ್ಕೆ ಏರಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT