ಗುರುವಾರ , ಜುಲೈ 7, 2022
23 °C

ಪೆಗಾಸಸ್ ಖರೀದಿ ಪ್ರಸ್ತಾವ ‌ತಿರಸ್ಕರಿಸಿದ್ದೆ: ಮಮತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ‘ಇಸ್ರೇಲ್‌ನ ಎನ್‌ಎಸ್‌ಒ ಸಂಸ್ಥೆಯು ತನ್ನ ‘ಪೆಗಾಸಸ್’ ಕುತಂ ತ್ರಾಂಶವನ್ನು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಮಾರಾ ಟ ಮಾಡಲು ನಾಲ್ಕೈದು ವರ್ಷಗಳ ಹಿಂದೆ ಯತ್ನಿಸಿತ್ತು. ₹25 ಕೋಟಿ ಮೊತ್ತದ ಈ ಪ್ರಸ್ತಾವವನ್ನು ನಾನು ತಿರಸ್ಕರಿಸಿದ್ದೆ’ ಎಂದು ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಹೇಳಿದ್ದಾರೆ.

ಪೆಗಾಸಸ್ ಮೂಲಕ ಕೇಂದ್ರ ಸರ್ಕಾರವು ಗೂಢಚರ್ಯೆ ಮಾಡುತ್ತಿದೆ ಎಂದು ಅವರು ಈ ಹಿಂದೆ ಆರೋಪಿಸಿದ್ದರು.

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬುಧವಾರ ಈ ವಿಚಾರವನ್ನು ಬಹಿರಂಗಪಡಿಸಿದ್ದ ಅವರು, ಗುರುವಾರ ಸುದ್ದಿಗಾರರ ಜೊತೆ ಮಾತ ನಾಡುವಾಗಲೂ ಪುನರುಚ್ಚರಿಸಿದರು. ‘ಅವರು ಕುತಂತ್ರಾಂಶವನ್ನು ಮಾರಾಟ ಮಾಡಲು ಎಲ್ಲ ಕಡೆ ಯತ್ನಿಸುತ್ತಿದ್ದಾರೆ. ಹಾಗೆಯೇ ರಾಜ್ಯದ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ ಮಾರಾಟ ಮಾಡಲು ಮುಂದಾಗಿದ್ದರು’ ಎಂದಿದ್ದಾರೆ. 

ಕುತಂತ್ರಾಂಶವನ್ನು ರಾಜಕೀಯವಾಗಿ ಬಳಸಿಕೊಳ್ಳಬಹುದು. ನ್ಯಾಯಾಧೀಶರ, ಸಾಮಾಜಿಕ ಕಾರ್ಯಕರ್ತರ ಮೇಲೆ ಗೂಢಚರ್ಯೆ ನಡೆಸಲು ಬಳಸಬಹುದು ಎಂಬ ಕಾರಣಕ್ಕೆ ಖರೀದಿಸಲು ಒಪ್ಪಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿದ್ದಾಗ ಪೆಗಾಸಸ್ ಅನ್ನು ಆಂಧ್ರ ಪ್ರದೇಶ ಸರ್ಕಾರ ಖರೀದಿಸಿತ್ತು ಎಂದು ಅವರು ಹೇಳಿದ್ದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು