ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಡಿಎಫ್, ಯುಡಿಎಫ್‌ನಿಂದ ಬೇಸರಗೊಂಡಿರುವ ಕೇರಳದ ಜನ ಬದಲಾವಣೆ ಬಯಸಿದ್ದಾರೆ: ಮೋದಿ

Last Updated 2 ಏಪ್ರಿಲ್ 2021, 11:50 IST
ಅಕ್ಷರ ಗಾತ್ರ

ಪತ್ತನಂತಿಟ್ಟ: ಆಡಳಿತಾರೂಢ ಎಲ್‌ಡಿಎಫ್ ಮತ್ತು ಯುಡಿಎಫ್‌ ಬಗ್ಗೆ ಕೇರಳದ ಜನ ಬೇಸರಗೊಂಡಿದ್ದು ಬದಲಾವಣೆ ಬಯಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಶಬರಿಮಲೆ ಅಯ್ಯಪ್ಪ ದೇಗುಲ ಇರುವ ಪತ್ತನಂತಿಟ್ಟ ಜಿಲ್ಲೆಯ ಕೊನ್ನಿಯಲ್ಲಿ ಚುನಾವಣಾ ಪ್ರಚಾರ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಎಲ್‌ಡಿಎಫ್ ಮತ್ತು ಯುಡಿಎಫ್‌ ಸಾಕು ಎಂದು ಕೇರಳದ ಜನ ಹೇಳುತ್ತಿದ್ದಾರೆ. ಬಿಜೆಪಿ ಮತ್ತು ಎನ್‌ಡಿಎಯ ಅಭಿವೃದ್ಧಿ ಅಜೆಂಡಾದತ್ತ ಮುಖ ಮಾಡುತ್ತಿದ್ದಾರೆ. ಪ್ರಗತಿಪರರು ಮತ್ತು ವಿದ್ಯಾವಂತರನ್ನು ರಾಜಕೀಯಕ್ಕೆ ತಂದಿರುವುದಕ್ಕೆ ಕೇರಳದ ವೃತ್ತಿಪರ ಸಮುದಾಯವು ಮೆಚ್ಚುಗೆ ವ್ಯಕ್ತಪಡಿಸಿದೆ. ಮೆಟ್ರೋಮ್ಯಾನ್ ಇ. ಶ್ರೀಧರನ್ ಅವರನ್ನು ಬಿಜೆಪಿಯು ರಾಜಕೀಯಕ್ಕೆ ಕರೆತಂದಿರುವುಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಮೋದಿ ಹೇಳಿದ್ದಾರೆ.

ಶ್ರೀಧರನ್ ಅವರಂತಹ ಗೌರವಾನ್ವಿತರ ಸಕ್ರಿಯ ಉಪಸ್ಥಿತಿಯು ಕೇರಳ ರಾಜಕೀಯದಲ್ಲಿ ಬದಲಾವಣೆ ತರಲಿದೆ. ಅನೇಕ ವರ್ಷಗಳಿಂದ ಮಹಾನ್ ಸಾಧನೆ ಮಾಡಿದ ವ್ಯಕ್ತಿ ಸಮಾಜಕ್ಕೆ ಸೇವೆ ಸಲ್ಲಿಸುವ ಸಲುವಾಗಿ ಬಿಜೆಪಿಗೆ ಆದ್ಯತೆ ನೀಡಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT