ಮಂಗಳವಾರ, ಮಾರ್ಚ್ 21, 2023
31 °C

ಪ್ರತಿಭಟನೆಗಳ ನಡುವೆಯೂ ಮತ್ತೆ ಏರಿಕೆಯಾದ ಪೆಟ್ರೋಲ್‌ ದರ

ಡೆಕ್ಕನ್‌ ಹೆರಾಲ್ಡ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ನಡುವೆಯೂ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಏರಿಕೆ ಮುಂದುವರಿದಿದೆ.

ಭಾರತೀಯ ತೈಲ ನಿಗಮದ ಅಧಿಸೂಚನೆ ಪ್ರಕಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ ಪೆಟ್ರೋಲ್‌ ಬೆಲೆ 35 ಪೈಸೆ ಮತ್ತು ಡೀಸೆಲ್‌ 15 ಪೈಸೆಯಷ್ಟು ಏರಿಕೆಯಾಗಿದೆ.

ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ ದರ ನೂರರ ಗಡಿ ದಾಟಿದ ಬಳಿಕ ಡೀಸೆಲ್‌ ಬೆಲೆಯೂ ಶತಕದತ್ತ ಸಾಗಿದೆ. ದೆಹಲಿಯಲ್ಲಿ ಪೆಟ್ರೋಲ್‌ ಪ್ರತಿ ಲೀಟರ್‌ಗೆ ₹ 101.54 ಇದ್ದರೆ, ಡೀಸೆಲ್‌ ದರ ₹ 89.87ಕ್ಕೆ ತಲುಪಿದೆ.

ಪೆಟ್ರೋಲ್‌ ಬೆಲೆ ಮೊದಲ ಸಲ ನೂರರ ಗಡಿ ದಾಟಿದ್ದ ಮುಂಬೈನಲ್ಲಿ ಸದ್ಯ ಈ ಇಂಧನ ದರ ಪ್ರತಿ ಲೀಟರ್‌ಗೆ ₹ 107.54 ರೂ. ಇದೆ. ಡೀಸೆಲ್‌ ಬೆಲೆ ₹ 97.45ಕ್ಕೆ ತಲುಪಿದೆ.

ಕೋಲ್ಕತ್ತದಲ್ಲಿ ಪೆಟ್ರೋಲ್‌ ದರ ₹ 101.74 ರಷ್ಟಿದ್ದರೆ, ಡೀಸೆಲ್‌ ಬೆಲೆ ₹ 93.02ಕ್ಕೆ ತಲುಪಿದೆ. ಅಂದಹಾಗೆ ರಾಜ್ಯ ರಾಜಧಾನಿಯಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಕ್ರಮವಾಗಿ ₹ 104.94 ಮತ್ತು ₹ 95.26 ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು