ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶದಲ್ಲಿರುವ ಸದಸ್ಯರಿಂದ ರಹಸ್ಯವಾಗಿ ಹಣ ಸಂಗ್ರಹಿಸುತ್ತಿದ್ದ ಪಿಎಫ್‌ಐ: ಇ.ಡಿ

Last Updated 23 ಸೆಪ್ಟೆಂಬರ್ 2022, 18:00 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಗಳಲ್ಲಿರುವ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ (ಪಿಎಫ್‌ಐ) ಕೆಲ ಸದಸ್ಯರು ಭಾರತದಲ್ಲಿರುವ ಅವರ ಎನ್‌ಆರ್‌ಐ ಖಾತೆಗಳಿಗೆ ಹಣ ಕಳುಹಿಸುತ್ತಿದ್ದು, ಈ ಹಣವನ್ನು ಸಂಘಟನೆಯ ಮುಖಂಡರಿಗೆ ವರ್ಗಾಯಿಸಲಾಗುತ್ತಿತ್ತು ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ಹೇಳಿದೆ.

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಿಂದ (ಎಫ್‌ಸಿಆರ್‌ಎ) ತಪ್ಪಿಸಿಕೊಳ್ಳಲು ಸಂಘಟನೆಯ ಸದಸ್ಯರು ಈ ತಂತ್ರ ಅನುಸರಿಸುತ್ತಿದ್ದರು ಎಂದು ಇ.ಡಿ ತಿಳಿಸಿದೆ.

‘ವಿದೇಶಗಳಿಂದ ಸಂದಾಯವಾಗುತ್ತಿದ್ದ ಹಣ ಕುರಿತ ಮಾಹಿತಿಯನ್ನು ಸರ್ಕಾರಿ ಸಂಸ್ಥೆಗಳಿಂದ ಮುಚ್ಚಿಡಲಾಗುತ್ತಿತ್ತು. ಪಿಎಫ್‌ಐ,ಎಫ್‌ಸಿಆರ್‌ಎ ಅಡಿ ನೋಂದಾಯಿತ ಸಂಘಟನೆಯಲ್ಲ. ಹೀಗಾಗಿ, ಈ ರೀತಿ ಹಣ ಸಂಗ್ರಹಿಸುವಾಗ ಸಂಬಂಧಿಸಿದ ಕಾನೂನನ್ನು ಪಿಎಫ್‌ಐ ಪಾಲಿಸುತ್ತಿರಲಿಲ್ಲ’ ಎಂದೂ ಹೇಳಿದೆ.

‘ಪಿಎಫ್‌ಐ ಹಾಗೂ ಇತರ ಸಂಘಟನೆಗಳು ಕಳೆದ ಕೆಲ ವರ್ಷಗಳ ಅವಧಿಯಲ್ಲಿ ₹ 120 ಕೋಟಿಗೂ ಅಧಿಕ ಹಣ ಸಂಗ್ರಹಿಸಿವೆ’ ಎಂದು ಇ.ಡಿ ತಿಳಿಸಿದೆ.

ಎಫ್‌ಸಿಆರ್‌ಎ: ಮುಂದಿನ ಮಾರ್ಚ್‌ವರೆಗೆ ಅವಧಿ ವಿಸ್ತರಣೆ

ನವದೆಹಲಿ: ಸ್ವಯಂ ಸೇವಾ ಸಂಸ್ಥೆಗಳು ಹೊಂದಿರುವ ‘ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ’ಯಡಿ (ಎಫ್‌ಸಿಆರ್‌ಎ) ನೋಂದಣಿಯ ಸಿಂಧುತ್ವ ಹಾಗೂ ಅರ್ಜಿಗಳ ನವೀಕರಿಸುವುದಕ್ಕೆ ಸಂಬಂಧಿಸಿದ ಅವಧಿಯನ್ನು ಮುಂದಿನ ವರ್ಷ ಮಾರ್ಚ್‌ 31ರ ವರೆಗೆ ವಿಸ್ತರಿಸಲಾಗಿದೆ.

ಸಾರ್ವಜನಿಕ ಹಿತಾಸಕ್ತಿ ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT