ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹ ಜೀವನ ನೋಂದಣಿಗೆ ನಿಯಮ: ‘ಸುಪ್ರೀಂ’ಗೆ ಪಿಐಎಲ್‌ ಸಲ್ಲಿಕೆ

Last Updated 28 ಫೆಬ್ರುವರಿ 2023, 15:21 IST
ಅಕ್ಷರ ಗಾತ್ರ

ನವದೆಹಲಿ: ಸಹ ಜೀವನ ಸಂಗಾತಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆಯಂತಹ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಹ ಜೀವನ ಸಂಬಂಧಗಳ (ಲೀವ್‌ ಇನ್‌ ರಿಲೇಷನ್‌ಶಿಪ್‌) ನೋಂದಣಿಗಾಗಿ ನಿಯಮ ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.

ಮುಂಬೈನ ಯುವತಿ ಶ್ರದ್ಧಾ ವಾಲಕರ್‌ ತನ್ನ ಸಹ ಜೀವನ ಸಂಗಾತಿ ಆಫ್ತಾಬ್ ಅಮೀನ್ ಪೂನಾವಾಲಾ ಎಂಬಾತನಿಂದ ಬರ್ಬರ ಹತ್ಯೆಗೀಡಾದ ಪ್ರಕರಣ ಉಲ್ಲೇಖಿಸಿರುವ ಅರ್ಜಿದಾರರು, ಸಹ ಜೀವನದ ಸಂಬಂಧಗಳ ನೋಂದಣಿಗೆ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸಬೇಕೆಂದು ಕೋರಿದ್ದಾರೆ.

ಪಿಐಎಲ್‌ ಸಲ್ಲಿಸಿರುವ ವಕೀಲರಾದ ಮಮತಾ ರಾಣಿ, ‘ಸುಳ್ಳು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿರುವುದರಲ್ಲಿ ಭಾರಿ ಹೆಚ್ಚಳವಾಗಿದೆ. ಇಂತಹ ಪ್ರಕರಣಗಳಲ್ಲಿ ಸಂತ್ರಸ್ತೆಯರು ಆರೋಪಿತರೊಂದಿಗೆ ಸಹ ಜೀವನ ಸಂಬಂಧದಲ್ಲಿದ್ದುದಾಗಿ ಹೇಳಿಕೊಳ್ಳುತ್ತಾರೆ. ಸಹ ಜೀವನ ಸಂಬಂಧಕ್ಕೆ ನಿರ್ದಿಷ್ಟ ಕಾನೂನು ಚೌಕಟ್ಟು ಇಲ್ಲದೆ, ಸೂಕ್ತ ಸಾಕ್ಷ್ಯಾಧಾರಗಳಿಂದ ಅಪರಾಧಗಳನ್ನು ನ್ಯಾಯಾಲಯಗಳಲ್ಲಿ ಸಾಬೀತುಪಡಿಸುವುದು ಕಷ್ಟಸಾಧ್ಯವಾಗುತ್ತಿದೆ’ ಎಂದು ಹೇಳಿದ್ದಾರೆ.

ಸಹ ಜೀವನ ಸಂಬಂಧಗಳ ನೋಂದಣಿಯಾದರೆ, ಸಂಗಾತಿಗಳಿಗೂ ಪರಸ್ಪರರ ಬಗ್ಗೆ ನಿಖರ ಮಾಹಿತಿ ಲಭಿಸುತ್ತದೆ. ಸಹ ಜೀವನ ಸಂಬಂಧದಲ್ಲಿರುವವರ ವೈವಾಹಿಕ ಸ್ಥಿತಿಗತಿ, ಅಪರಾಧ ಹಿನ್ನೆಲೆ ಮತ್ತು ಇತರ ಸಂಬಂಧಿತ ವಿವರಗಳು ಸರ್ಕಾರಕ್ಕೂ ಸಿಗುತ್ತವೆ ಎಂದು ಪಿಐಎಲ್‌ನಲ್ಲಿ ವಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT