ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿ 1ರಿಂದ ಪ್ಲಾಸ್ಟಿಕ್‌ ಕಡ್ಡಿಗಳ ಬಳಕೆಗೆ ನಿಷೇಧ

ಬಲೂನ್‌, ಕ್ಯಾಂಡಿಸ್‌, ಐಸ್‌ಕ್ರೀಂಗೆ ಉಪಯೋಗಿಸುವ ವಸ್ತುಗಳಿಗೆ ನಿಯಂತ್ರಣ
Last Updated 23 ಜುಲೈ 2021, 11:09 IST
ಅಕ್ಷರ ಗಾತ್ರ

ನವದೆಹಲಿ: ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಕ್ಯಾಂಡಿ ಕಡ್ಡಿಗಳು ಮತ್ತು ಐಸ್‌ಕ್ರೀಂ ಕಡ್ಡಿಗಳನ್ನು 2022ರ ಜನವರಿ 1ರಿಂದ ನಿಷೇಧಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಬಗ್ಗೆ ಸಂಸತ್‌ನಲ್ಲಿ ಪರಿಸರ ಖಾತೆ ರಾಜ್ಯ ಸಚಿವ ಅಶ್ವಿನಿ ಚೌಬೆ ಮಾಹಿತಿ ನೀಡಿದ್ದಾರೆ. ಈ ವರ್ಷದ ಆರಂಭದಲ್ಲಿ ಹೊರಡಿಸಲಾದ ಅಧಿಸೂಚನೆ ಅನ್ವಯ, ಒಂದು ಬಾರಿ ಬಳಕೆಯಾಗುವ ಕೆಲವು ಪ್ಲಾಸ್ಟಿಕ್‌ ವಸ್ತುಗಳನ್ನು ತಯಾರಿಸುವುದು, ಆಮದು ಮಾಡಿಕೊಳ್ಳುವುದು, ಸಂಗ್ರಹಿಸುವುದು, ವಿತರಿಸುವುದು, ಮಾರಾಟ ಮತ್ತು ಬಳಕೆಯನ್ನು 2022ರ ಜನವರಿ 1ರಿಂದ ನಿಷೇಧಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ಲಾಸ್ಟಿಕ್‌ ಕಡ್ಡಿ ಹೊಂದಿರುವ ’ಇಯರ್‌ ಬಡ್ಸ್‌’, ಬಲೂನ್‌ಗಳಿಗೆ ಅಳವಡಿಸುವ ಪ್ಲಾಸ್ಟಿಕ್‌ ಕಡ್ಡಿಗಳು, ಪ್ಲಾಸ್ಟಿಕ್‌ ಧ್ವಜಗಳು, ಕ್ಯಾಂಡಿ ಕಡ್ಡಿಗಳು, ಐಸ್‌ಕ್ರೀಂ ಕಡ್ಡಿಗಳು, ಅಲಂಕಾರಕ್ಕೆ ಬಳಸುವ ಪಾಲಿಸ್ಟಿರಿನ್‌ (ಥರ್ಮೊಕೊಲ್‌) ಜನವರಿ 1ರಿಂದ ನಿಷೇಧಿಸಲು ಉದ್ದೇಶಿಸಲಾಗಿದೆ. ಒಂದು ಬಾರಿ ಬಳಸುವ ಪ್ಲಾಸ್ಟಿಕ್‌ ವಸ್ತುಗಳಾದ ಪ್ಲೇಟ್‌ಗಳು, ಕಪ್‌ಗಳು, ಲೋಟಗಳು, ಚಮಚೆ, ಚಾಕು, ಕಂಟೈನರ್‌ ಸೇರಿದಂತೆ 100 ಮೈಕ್ರಾನ್‌ಗಳಿಗಿಂತ ಕಡಿಮೆ ಇರುವ ವಸ್ತುಗಳನ್ನು ಮುಂದಿನ ವರ್ಷದ ಜುಲೈನಿಂದ ನಿಷೇಧಿಸುವ ಸಾಧ್ಯತೆ ಇದೆ.

ಇದೇ ವರ್ಷದ ಸೆಪ್ಟೆಂಬರ್‌ನಿಂದ ಒಂದು ಬಾರಿ ಬಳಸುವ 120 ಮೈಕ್ರಾನ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್‌ ಚೀಲಗಳನ್ನು ನಿಷೇಧಿಸಲಾಗುವುದು ಎಂದು ಸಚಿವರು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.

ಒಂದು ಬಾರಿ ಬಳಕೆಗೆ ಗುರುತಿಸಲಾದ ಪ್ಲಾಸ್ಟಿಕ್‌ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ವಿಶೇಷ ಕಾರ್ಯ ಪಡೆಯನ್ನು ರಚಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಈಗಾಗಲೇ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿಶೇಷ ಕಾರ್ಯಪಡೆಯನ್ನು ರಚಿಸಿವೆ. ರಾಷ್ಟ್ರಮಟ್ಟದಲ್ಲೂ ಸಚಿವಾಲಯವು ಕಾರ್ಯಪಡೆಯನ್ನು ರಚಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT