ಶುಕ್ರವಾರ, ಏಪ್ರಿಲ್ 23, 2021
28 °C
ಟ್ವೀಟ್‌ನಲ್ಲಿ ಮಹಿಳಾ ಕರಕುಶಲ ಉದ್ಯಮಿಗಳ ಉತ್ಪನ್ನ ಕೊಂಡಾಡಿದ ಮೋದಿ

ಮಹಿಳಾ ಉದ್ಯಮಿಗಳ ಉತ್ಪನ್ನ ಕೊಂಡು ಶುಭಾಶಯ ಕೋರಿದ ಪ್ರಧಾನಿ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಉದ್ಯಮ, ಸೃಜನಶೀಲತೆ ಮತ್ತು ಭಾರತದ ಸಂಸ್ಕೃತಿಯನ್ನು ಪರಿಚಯಿಸುವ ಮಹಿಳಾ ಉದ್ಯಮಿಗಳು ತಯಾರಿಸಿರುವ ಉತ್ಪನ್ನಗಳನ್ನು ಖರೀದಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಟ್ವಿಟರ್‌ನಲ್ಲಿ ಮಹಿಳೆಯರಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭ ಕೋರಿದರು.

ಭಾರತವು ‘ಆತ್ಮನಿರ್ಭರ್’ ಆಗುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿರುವ ಮೋದಿ, ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಜನರು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.

ಓದಿ: 

ತಾವು ಖರೀದಿಸಿದ ಉತ್ಪನ್ನಗಳ ವಿವರಗಳನ್ನು ಹಂಚಿಕೊಂಡ ಮೋದಿ, ‘ತಮಿಳುನಾಡಿನ ತೋಡಾ ಬುಡಕಟ್ಟಿನ ಕುಶಲಕರ್ಮಿಗಳು ತಯಾರಿಸಿರುವ ಸೊಗಸಾದ ಕೈಕಸೂತಿಯ ಈ ಶಾಲು ಅದ್ಭುತವಾಗಿ ಕಾಣುತ್ತದೆ. ಈ ಉತ್ಪನ್ನವನ್ನು ಟ್ರೈಬ್ಸ್ ಇಂಡಿಯಾ ಮಾರಾಟ ಮಾಡಿದೆ’ ಎಂದು ಹೇಳಿದ್ದಾರೆ.

ಕರಕುಶಲ ಕಲೆಯುಳ್ಳ ಗೋಂಡ್ ಪೇಪರ್ ಕಲಾಕೃತಿ ಮತ್ತು ನಾಗಾ ಶಾಲಿನ ವಿವರ ಹಂಚಿಕೊಂಡಿರುವ ಅವರು, ‘ಬುಡಕಟ್ಟು ಚಿತ್ರಕಲೆ ಅನನ್ಯವಾಗಿದೆ. ನಾಗಾ ಸಂಸ್ಕೃತಿಯ ಈ ಶಾಲು ಧೈರ್ಯ, ಸಾಹಸದ ಪ್ರತೀಕ. ಅಂತೆಯೇ, ಮಹಾತ್ಮ ಗಾಂಧಿ ಅವರಿಗೆ ಅತ್ಯಾಪ್ತವಾಗಿದ್ದ ಖಾದಿ ಹತ್ತಿ ಬಟ್ಟೆಯ ಮಧುಬನಿ ಚಿತ್ರಕಲಾ ಶೈಲಿ ಸ್ಟೋಲ್ ಅನ್ನೂ ಖರೀದಿಸಿದ್ದೇನೆ. ಇದಂತೂ ಉತ್ಕೃಷ್ಟ ಗುಣಮಟ್ಟದ ಉತ್ಪನ್ನ’ ಎಂದೂ ಮೋದಿ ಪ್ರಶಂಸೆ ಮಾಡಿದ್ದಾರೆ.

ಓದಿ: 

‘ಪಶ್ಚಿಮ ಬಂಗಾಳದ ಸೆಣಬಿನ ಫೈಲ್ ಫೋಲ್ಡರ್ ನಿಮ್ಮ ಮನೆಯಲ್ಲಿ ಇರಲೇಬೇಕಾದ ಉತ್ಪನ್ನ. ಅಂತೆಯೇ ನಾನು ಆಗಾಗ್ಗೆ ಧರಿಸುವ ಗಮುಸಾ ಉಡುಪು ಅತ್ಯಂತ ಆರಾಮದಾಯಕ ಉಡುಗೆ. ಕೇರಳದ ಮಹಿಳೆಯೊಬ್ಬರು ತಯಾರಿಸಿರುವ ಕ್ಲಾಸಿಕ್ ಪಾಮ್ ಕ್ರಾಫ್ಟ್‌ನ ನಿಲವಿಲಕ್ಕು (ಮರದ ಎತ್ತರದ ದೀಪಸ್ತಂಭ)ಗಾಗಿ ನಾನು ಕಾಯುತ್ತಿರುವೆ. ನಾರಿಶಕ್ತಿಯು ಸ್ಥಳೀಯ ಕರಕುಶಲ ವಸ್ತುಗಳನ್ನು ಜನಪ್ರಿಯಗೊಳಿಸಿದೆ’ ಎಂದು ಮೋದಿ ಮೆಚ್ಚುಗೆ ಸೂಚಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು