ಸೋಮವಾರ, ಸೆಪ್ಟೆಂಬರ್ 21, 2020
21 °C
ರಾಷ್ಟ್ರೀಯ ಸ್ವಚ್ಛತಾ ಕೇಂದ್ರ ಉದ್ಘಾಟನೆ ವೇಳೆ ಪ್ರಶ್ನೆ ಮಾಡಿದ ಪ್ರಧಾನ ಮಂತ್ರಿ

2014ಕ್ಕೂ ಹಿಂದೆ ದೇಶಕ್ಕೆ ಕೋವಿಡ್‌ ಬಂದಿದ್ದರೆ? ಮೋದಿ ಪ್ರಶ್ನೆ

ಪಿಟಿಐ Updated:

ಅಕ್ಷರ ಗಾತ್ರ : | |

ದೆಹಲಿ: ರಾಷ್ಟ್ರೀಯ ಸ್ವಚ್ಛಭಾರತ ಆಂದೋಲನಕ್ಕೆ ಪ್ರೋತ್ಸಾಹ ನೀಡುವ, ಸಂವಾದ ಕೇಂದ್ರ ‘ರಾಷ್ಟ್ರೀಯ ಸ್ವಚ್ಛತಾ ಕೇಂದ್ರ’ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ರಾಜ್‌ಘಾಟ್‌ನಲ್ಲಿ ಶನಿವಾರ ಉದ್ಘಾಟಿಸಿದರು.

ಭಾರತವನ್ನು ಕಸದಿಂದ ಮುಕ್ತಗೊಳಿಸುವ ಒಂದು ವಾರದ ಆಂದೋಲನಕ್ಕೆ ಮೋದಿ ಇದೇ ವೇಳೆ ಚಾಲನೆ ನೀಡಿದರು. ಅಲ್ಲದೆ, ಕರೋನವೈರಸ್ ವಿರುದ್ಧದ ಹೋರಾಟದಲ್ಲಿ ಸ್ವಚ್ಛ ಭಾರತ್‌ ಅಭಿಯಾನವು ದೊಡ್ಡ ಬೆಂಬಲವಾಗಿದೆ ಎಂದು ಅವರು ಹೇಳಿದರು.

ಭಾರತವನ್ನು ಕಸದಿಂದ ಮುಕ್ತಗೊಳಿಸುವ ಒಂದು ವಾರಗಳ ಈ ಆಂದೋಲನವು ಆಗಸ್ಟ್‌ 15ರ ವರೆಗೆ ನಡೆಯಲಿದೆ ಎಂದು ಮೋದಿ ತಿಳಿಸಿದರು.

ಸ್ವಚ್ಛತೆಯ ಮಹತ್ವ ಸಾರಿದ ಮಹಾತ್ಮಾ ಗಾಂಧಿ ಅವರಿಗೆ ‘ರಾಷ್ಟ್ರೀಯ ಸ್ವಚ್ಛತಾ ಕೇಂದ್ರ’ವು ಸಮರ್ಪಣೆಗೊಳಿಸಲಾಗಿದೆ ಎಂದು ಮೋದಿ ಹೇಳಿದರು.

‘2014ಕ್ಕೂ ಹಿಂದೆ ಕೊರೊನಾ ವೈರಸ್‌ ಎಂಬ ಸಾಂಕ್ರಾಮಿಕ ರೋಗ ದೇಶಕ್ಕೆ ಬಂದಿದ್ದರೆ ಏನಾಗುತ್ತಿತ್ತು ಎಂದು ಊಹಿಸಿ. ಬಯಲು ಸೌಚ ಬಳಸುವವರ ಸಂಖ್ಯೆ ಶೇ.60ರಷ್ಟು ಇದ್ದ ಕಾಲದಲ್ಲಿ ನಾವು ಲಾಕ್‌ಡೌನ್‌ ಮಾಡಲು ಸಾಧ್ಯವಿತ್ತೇ? ಸ್ವಚ್ಛಭಾರತ ಅಭಿಯಾನವು ಕೋವಿಡ್‌ ವಿರುದ್ಧದ ಹೋರಾಟಕ್ಕೆ ಪೂರಕವಾಗಿದೆ,’ ಎಂದು ಮೋದಿ ಅಭಿಪ್ರಾಯಪಟ್ಟರು.

ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸುವಂತೆಯೂ, ಮಾಸ್ಕ್‌ ಧರಿಸುವಂತೆಯು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಧಾನಿ ಸಲಹೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು