ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್ ಕಿ ಬಾತ್ ಮಾಸಿಕ ರೇಡಿಯೊ ಕಾರ್ಯಕ್ರಮಕ್ಕೆ ಸಲಹೆಗಳನ್ನು ಆಹ್ವಾನಿಸಿದ ಪ್ರಧಾನಿ

Last Updated 18 ಆಗಸ್ಟ್ 2020, 7:10 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ನ 68ನೇ ಆವೃತ್ತಿಗೆ ಜನರು ತಮ್ಮ ಸಲಹೆ ಮತ್ತು ಆಲೋಚನೆಗಳನ್ನು ಹಂಚಿಕೊಳ್ಳಲು ಮಂಗಳವಾರ ಕೇಳಿದ್ದಾರೆ.

ಪ್ರತಿ ತಿಂಗಳ ಕೊನೆಯ ಭಾನುವಾರದಂದು ನಡೆಯುವ ಮನ್ ಕಿ ಬಾತ್ ಕಾರ್ಯಕ್ರಮವು ಈ ತಿಂಗಳ ಆಗಸ್ಟ್ 30ರಂದು ನಡೆಯಲಿದೆ.

NaMo ಮತ್ತು MyGov ಆ್ಯಪ್‌ನಲ್ಲಿ ಜನರು ತಮ್ಮ ಸಲಹೆಗಳನ್ನು ನೀಡಬಹುದು ಅಥವಾ 1800-11-7800ಗೆ ಕರೆ ಮಾಡಿ ತಮ್ಮ ಸಂದೇಶಗಳನ್ನು ರೆಕಾರ್ಡ್ ಮಾಡುವ ಮೂಲಕ ಜನರು ತಮ್ಮ ಸಲಹೆ-ಸೂಚನೆಗಳನ್ನು ಹಂಚಿಕೊಳ್ಳುವಂತೆ ಪ್ರಧಾನಿ ಕೇಳಿದ್ದಾರೆ.

ಸಲಹೆಗಳನ್ನು ಸ್ವೀಕರಿಸಲು ದೂರವಾಣಿ ಮಾರ್ಗಗಳು ಆಗಸ್ಟ್ 10 ರಿಂದ ತೆರೆದಿರುತ್ತವೆ.
'30ರಂದು ನಡೆಯಲಿರುವ ಈ ತಿಂಗಳ ಮನ್‌ ಕಿ ಬಾತ್‌ನಲ್ಲಿ ಏನನ್ನು ಚರ್ಚಿಸಬೇಕು ಎಂದು ನೀವು ಭಾವಿಸುತ್ತೀರಿ? 1800-11-7800 ಅನ್ನು ಡಯಲ್ ಮಾಡುವ ಮೂಲಕ ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಿ. ನೀವು NaMo ಮತ್ತು MyGov ನಲ್ಲಿಯೂ ಬರೆಯಬಹುದು. ನಿಮ್ಮ ಸಲಹೆ ಮತ್ತು ಸೂಚನೆಗಳನ್ನು ಎದುರು ನೋಡುತ್ತಿದ್ದೇವೆ' ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

'ಕಾರ್ಗಿಲ್ ವಿಜಯ್ ದಿವಸ್'ನ 21ನೇ ವಾರ್ಷಿಕೋತ್ಸವದ ದಿನದಂದಿದ್ದ 'ಮನ್ ಕಿ ಬಾತ್'ನ 67ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಪಾಕಿಸ್ತಾನವನ್ನು ಟೀಕಿಸಿದರು ಮತ್ತು ಭಾರತದ ಭೂಮಿಯನ್ನು ವಶಪಡಿಸಿಕೊಳ್ಳಲು ಮತ್ತು ಅದರ ಆಂತರಿಕ ಸಂಘರ್ಷದಿಂದ ಅಲ್ಲಿನ ಜನರ ದೃಷ್ಟಿಯನ್ನು ಬೇರೆ ಕಡೆಗೆ ಸೆಳೆಯುವ ತಂತ್ರದ ಭಾಗವಾಗಿ ಪಾಕಿಸ್ತಾನ ದೃಷ್ಕೃತ್ಯ ಎಸಗಿತ್ತು. ಭಾರತದ ಸೌಹಾರ್ದ ಪ್ರಯತ್ನಗಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಹಿಮ್ಮುಖವಾಗಿ ಕೆಲಸ ಮಾಡಲು ಪ್ರಯತ್ನಿಸಿದೆ ಎಂದು ಹೇಳಿದರು.

ಕಾರ್ಗಿಲ್ ಯುದ್ಧದ ಸಮಯದಲ್ಲಿನ ಸೈನಿಕರ ಶೌರ್ಯದ ಕಥೆಗಳನ್ನು ಯುವಕರು ಹಂಚಿಕೊಳ್ಳಬೇಕೆಂದು ಪ್ರಧಾನಿ ಒತ್ತಾಯಿಸಿದ್ದರು.

www.gallantryawards.gov.in ಎಂಬ ವೆಬ್‌ಸೈಟ್‌ಗೆ ಭೇಟಿ ನೀಡಿದರೆ, ಧೈರ್ಯಶಾಲಿಗಳು ಮತ್ತು ಅವರ ಶೌರ್ಯದ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬಹುದು. 'ನೀವು ಇವುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಂಡಾಗ, ಅವರು ಸಹ ಅದರಿಂದ ಸ್ಫೂರ್ತಿ ಪಡೆಯುತ್ತಾರೆ' ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT