ನೌಕಾಪಡೆ ಪರಾಕ್ರಮ ಶ್ಲಾಘಿಸಿದ ಪ್ರಧಾನಿ

ನವದೆಹಲಿ: ‘ದೇಶದ ಕರಾವಳಿ ರಕ್ಷಣೆ ಮಾಡುವಲ್ಲಿ ನೌಕಾಪಡೆ ಅದ್ಭುತ ಕಾರ್ಯ ಮಾಡುತ್ತಿದೆ. ನೈಸರ್ಗಿಕ ವಿಕೋಪ ಸೇರಿದಂತೆ ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸಿ ಮಾನವೀಯತೆಯನ್ನೂ ಮೆರೆದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತೀಯ ನೌಕಾಪಡೆ ದಿನಾಚರಣೆ ಹಿನ್ನೆಲೆಯಲ್ಲಿ ಶುಕ್ರವಾರ ಅವರು ಟ್ವೀಟ್ ಮೂಲಕ ಶ್ಲಾಘಿಸಿದ್ದಾರೆ.
‘ನೌಕಾಪಡೆಯ ಧೀರ ಸಿಬ್ಬಂದಿ ಹಾಗೂ ಅವರ ಕುಟುಂಬಗಳಿಗೆ ಈ ದಿನಾಚರಣೆಯ ಶುಭಾಶಯಗಳನ್ನು ಕೋರುವೆ. ಕಡಲ ಗಡಿಯನ್ನು ರಕ್ಷಣೆ ಮಾಡುವಲ್ಲಿ ಭಾರತೀಯ ನೌಕಾಪಡೆಯ ಬದ್ಧತೆ, ಮೆರೆದ ಶೌರ್ಯಕ್ಕೆ ಭವ್ಯ ಇತಿಹಾಸವೇ ಇದೆ’ ಎಂದೂ ಅವರು ಟ್ವೀಟ್ನಲ್ಲಿ ಬಣ್ಣಿಸಿದ್ದಾರೆ.
1971ರಲ್ಲಿ ಭಾರತ–ಪಾಕಿಸ್ತಾನ ಯುದ್ಧ ನಡೆದಾಗ ಡಿಸೆಂಬರ್ 4ರಂದು ಕರಾಚಿ ಬಂದರು ಮೇಲೆ ಭಾರತೀಯ ನೌಕಾಪಡೆ ದಾಳಿ ನಡೆಸಿ, ಶತ್ರು ಪಾಳೆಯಕ್ಕೆ ತಕ್ಕ ಉತ್ತರ ನೀಡಿತ್ತು. ಈ ದಾಳಿಯ ಸ್ಮರಣಾರ್ಥ ಪ್ರತಿವರ್ಷ ಡಿ.4ರಂದು ನೌಕಾಪಡೆ ದಿನವನ್ನು ಆಚರಿಸಲಾಗುತ್ತದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.