ಗುರುವಾರ , ಮಾರ್ಚ್ 30, 2023
21 °C

ಎಲ್‌.ಕೆ.ಅಡ್ವಾಣಿ ಜನ್ಮದಿನ: ಮೋದಿ, ಹಲವು ಮುಖಂಡರಿಂದ ಶುಭಾಶಯ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಜೆಪಿಯ ಧುರೀಣ, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರಿಗೆ 94ನೇ ಜನ್ಮದಿನ ಸಂದರ್ಭದಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಮುಖಂಡರು ಶುಭಕೋರಿದರು. ಪಕ್ಷ ಮತ್ತು ದೇಶಕ್ಕೆ ಅಡ್ವಾಣಿ ಅವರ ಸೇವೆಯನ್ನು ಮುಖಂಡರು ಇದೇ ಸಂದರ್ಭದಲ್ಲಿ ಮೆಲುಕುಹಾಕಿದ್ದಾರೆ.

‘ಅಡ್ವಾಣಿ ಅವರಿಗೆ ಜನ್ಮದಿನದ ಶುಭಾಶಯ. ಸುದೀರ್ಘ, ಆರೋಗ್ಯಕರ ಬದುಕು ಅವರದಾಗಲಿ. ಜನರ ಸಬಲೀಕರಣ ಮತ್ತು ದೇಶದ ಸಾಂಸ್ಕೃತಿಕ ಹಿರಿಮೆಯನ್ನು ಎತ್ತಿಹಿಡಿಯುವಲ್ಲಿನ ಅವರ ಮುತ್ಸದ್ಧಿತನಕ್ಕಾಗಿ ದೇಶ ಎಂದಿಗೂ ಅವರಿಗೆ ಆಭಾರಿಯಾಗಿರುತ್ತದೆ’ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಅಡ್ವಾಣಿ ಸದಾ ಮಾರ್ಗದರ್ಶಕರು, ಮುತ್ಸದ್ಧಿತನ, ದೂರದರ್ಶಿ ಚಿಂತನೆಗಾಗಿ ನಾನು ಗೌರವಿಸುವ ಹಲವು ಮುಖಂಡರಲ್ಲಿ ಅಡ್ವಾಣಿ ಅವರೂ ಒಬ್ಬರು ಎಂದು ಹೇಳಿದ್ದಾರೆ. 

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಅಡ್ವಾಣಿ ಅವರು ಪಕ್ಷವನ್ನು ಸಮೂಹದೆಡೆಗೆ ತೆಗೆದುಕೊಂಡ ಹೋದ ನಾಯಕ. ದೇಶದ ಅಭಿವೃದ್ಧಿಯಲ್ಲಿ  ಮುಖ್ಯ ಪಾತ್ರ ವಹಿಸಿದ್ದಾರೆ. ಅವರಿಗೆ ದೀರ್ಘಾಯುಷ್ಯ ಕೋರುತ್ತೇನೆ ಎಂದಿದ್ದಾರೆ.

80ರ ದಶಕದಲ್ಲಿ ರಾಮಜನ್ಮಭೂಮಿ ಅಭಿಯಾನದ ನಾಯಕತ್ವ ವಹಿಸಿಕೊಂಡಿದ್ದ ಅಡ್ವಾಣಿ ಅವರು ಬಿಜೆಪಿಯು ದೇಶದಲ್ಲಿ ಸಮೂಹದ ಪಕ್ಷವಾಗಿ ಗುರುತಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಅವರ ಜೊತೆಗೆ ಜನಸಂಘದ ಅವಧಿಯಲ್ಲಿಯೂ ಮುಂಚೂಣಿ ನಾಯಕರಾಗಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು