ಮೇ 26ಕ್ಕೆ ಪ್ರಧಾನಿ ಮೋದಿ ಹೈದರಾಬಾದ್‌ಗೆ

ಹೈದರಾಬಾದ್: ‘ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್’ ಸಂಸ್ಥೆಯ 20ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೈದರಾಬಾದ್ ಪ್ರವಾಸ ಕೈಗೊಳ್ಳಲಿದ್ದಾರೆ.
ದೇಶದಾದ್ಯಂತ ಪರ್ಯಾಯ ಕೂಟ ರಚನೆಗಾಗಿ ಪರ್ಯಾಯ ರಾಜಕೀಯ ನಾಯಕರ ಜೊತೆ ಸಭೆ ನಡೆಸುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಗುರುವಾರ ಜೆಡಿಎಸ್‌ನ ವರಿಷ್ಠ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರ ಭೇಟಿಗಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಹೀಗಾಗಿ, ಕೆಸಿಆರ್ ಅವರು ಈ ಬಾರಿ ಸಹ ಮೋದಿ ಅವರನ್ನು ಬರ ಮಾಡಿಕೊಳ್ಳಲು ಹೋಗದಿರುವ ಸಾಧ್ಯತೆಯಿದೆ. ಹೀಗಾದಲ್ಲಿ, 4 ತಿಂಗಳ ಅವಧಿಯೊಳಗೆ ಮೋದಿ ಅವರ ಸ್ವಾಗತಕ್ಕೆ ಹೋಗದೆ ತಪ್ಪಿಸಿಕೊಂಡಂತಾಗಲಿದೆ.
ಫೆಬ್ರುವರಿ 5ರಂದು ಹೈದರಾಬಾದ್ ಬಳಿ ನಿರ್ಮಾಣವಾಗಿರುವ ರಾಮಾನುಜಾಚಾರ್ಯರ ಪ್ರತಿಮೆ ಅನಾವರಣಕ್ಕೆ ಮೋದಿ ಅವರು ಬಂದಿದ್ದರು. ಈ ವೇಳೆ ಜ್ವರದ ನೆಪ ಹೇಳಿದ್ದ ಕೆಸಿಆರ್ ಅವರು ಮೋದಿ ಭೇಟಿಯಿಂದ ತಪ್ಪಿಸಿಕೊಂಡಿದ್ದರು.
ತೆಲಂಗಾಣವನ್ನು ತಾರತಮ್ಯದಿಂದ ಕಾಣಲಾಗುತ್ತಿದೆ ಎಂದು ಆರೋಪಿಸಿ ಕೆಸಿಆರ್ ಮತ್ತು ಅವರ ಪಕ್ಷದ ನಾಯಕರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರ ವಿರುದ್ಧ ಟೀಕಿಸುತ್ತಲೇ ಇದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.