ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಬದ್ಧತೆಯಿಂದಾಗಿ ಪಾಕ್‌ ಕುರಿತ ಭಾರತದ ನೀತಿಗೆ ಸ್ಪಷ್ಟ ರೂಪ: ಎಸ್‌.ಜೈಶಂಕರ್‌

Last Updated 5 ಜುಲೈ 2022, 13:39 IST
ಅಕ್ಷರ ಗಾತ್ರ

ನವದೆಹಲಿ: ಗಡಿಯಲ್ಲಿ ಉಗ್ರರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂಬ ಬಗ್ಗೆ ಪ್ರಧಾನಿ ಮೋದಿ ಬದ್ಧತೆಯಿಂದಾಗಿ ಪಾಕಿಸ್ತಾನ ಕುರಿತ ಭಾರತದ ನೀತಿ2014ರ ನಂತರ ಸ್ಪಷ್ಟರೂಪ ಪಡೆಯುವಂತಾಯಿತು ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದರು.

‘ಮೋದಿ@20: ಡ್ರೀಮ್ಸ್‌ ಮೀಟ್‌ ಡೆಲಿವೆರಿ’ ಹೆಸರಿನ ತಾವು ರಚಿಸಿದ ಪುಸ್ತಕವನ್ನು ಕುರಿತು ವಿಶ್ವವಿದ್ಯಾಲಯವು ಆಯೋಜಿಸಿದ್ದ ವಿಶೇಷ ಚರ್ಚೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿಜೈಶಂಕರ್ ಮಾತನಾಡಿದರು.

‘ಪ್ರಧಾನಿಯನ್ನು ವಿದೇಶದಲ್ಲಿ ‘ಸರ್ವೋತ್ತಮ ಭಾರತೀಯ’ ಎಂದು ಗುರುತಿಸಲಾಗುತ್ತದೆ. ರಾಜತಾಂತ್ರಿಕತೆ ಕುರಿತ ಅವರ ವ್ಯಕ್ತಿತ್ವದಿಂದಾಗಿ ವಿದೇಶಗಳು, ಅಲ್ಲಿನ ನಾಯಕರ ಜೊತೆಗೆ ಸಂವಹನಕ್ಕೆ ನೆರವಾಗಿದೆ’ ಎಂದರು.

ಪುಸ್ತಕದ ಆಯ್ದ ಭಾಗ ಓದಿದ ಅವರು, ‘ಅವರನ್ನು (ಮೋದಿ) ಚೀನಾದಲ್ಲಿ 2011ರಲ್ಲಿ ಮೊದಲು ನೋಡಿದಾಗ ನಾನು ರಾಯಭಾರಿಯಾಗಿದ್ದೆ. ಇತರೆ ನಾಯಕರಿಗಿಂತ ಭಿನ್ನವಾಗಿ ಅವರು ಬೆಳವಣಿಗೆ ಕುರಿತು ರಾಜಕೀಯ ವಿವರಣೆಯನ್ನು ಬಯಸಿದ್ದರು’ ಎಂದು ತಿಳಿಸಿದರು.

ಭಯೋತ್ಪಾದನೆ ಮತ್ತು ಸಾರ್ವಭೌಮತೆ ಕುರಿತು ವಿದೇಶಗಳಲ್ಲಿ ಮುಖ್ಯವಾಗಿ ಚೀನಾದಲ್ಲಿ ಏಕ ದನಿಯಲ್ಲಿ ಮಾತನಾಡಬೇಕು ಎಂದು ಮೋದಿ ಒತ್ತಿ ಹೇಳುತ್ತಿದ್ದರು. ಅವರ ನೀತಿ, ಕಾರ್ಯಕ್ರಮಗಳು ಪರಿಣಾಮಕಾರಿಯಾಗಿದ್ದರಿಂದಾಗಿ ವಿಶ್ವದಲ್ಲಿ ದೊಡ್ಡ ನಾಯಕನಾಗಿ ಬೆಳೆದಿದ್ದಾರೆ ಎಂದರು.

ಪುಸ್ತಕ ಕುರಿತಂತೆ ಅವರು, ಪುಸ್ತಕದ ಅತಿ ಹೆಚ್ಚಿನ ಭಾಗವನ್ನು ಸರ್ಕಾರದಿಂದ ಹೊರಗಿನವರೂ ಬರೆದಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT