ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮಸ್ತೆ ಟ್ರಂಪ್‌’ ಕಾರ್ಯಕ್ರಮದಿಂದಲೇ ದೇಶದಲ್ಲಿ ಕೊರೊನಾ ಹರಡಿತು: ನವಾಬ್‌ ಮಲಿಕ್‌

Last Updated 8 ಫೆಬ್ರುವರಿ 2022, 11:20 IST
ಅಕ್ಷರ ಗಾತ್ರ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ‘ನಮಸ್ತೆ ಟ್ರಂಪ್‌’ ಕಾರ್ಯಕ್ರಮವನ್ನು ‌ಏರ್ಪಡಿಸಿದ್ದರಿಂದಲೇ ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗಲು ಕಾರಣವಾಯಿತು ಎಂದು ಮಹಾರಾಷ್ಟ್ರದ ಸಚಿವ ನವಾಬ್‌ ಮಲಿಕ್‌ ಮಂಗಳವಾರ ಹೇಳಿದ್ದಾರೆ.

ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ ಮುಂಬೈಗೆ ಬಂದಿರುವ ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ತೆರಳುವಂತೆ ವಿರೋಧ ಪಕ್ಷಗಳು ಹೆದರಿಸುತ್ತಿವೆ ಎಂದು ಪ್ರಧಾನಿ ಮೋದಿ ಆರೋಪಿಸಿದ ಒಂದು ದಿನದ ನಂತರ ನವಾಬ್‌ ಮಲಿಕ್‌ ಈ ಹೇಳಿಕೆ ನೀಡಿದ್ದಾರೆ.

2020ರ ಫೆಬ್ರುವರಿಯಲ್ಲಿ ಅಹಮದಾಬಾದ್‌ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ‘ನಮಸ್ತೆ ಟ್ರಂಪ್‌’ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದರು.

ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ ಕಾಂಗ್ರೆಸ್‌ ತನ್ನ ಎಲ್ಲಾ ಮಿತಿಗಳನ್ನು ಮೀರಿದೆ. ಮುಂಬೈಗೆ ಬಂದಿರುವ ವಲಸೆ ಕಾರ್ಮಿಕರಿಗೆ ಅವರ ರಾಜ್ಯಗಳಿಗೆ ತೆರಳುವಂತೆ ಪಕ್ಷಗಳು ಹೆದರಿಸುತ್ತಿವೆ ಎಂದು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಸೋಮವಾರ ಆರೋಪಿಸಿದ್ದರು.

‘ಮಹಾರಾಷ್ಟ್ರ ಸರ್ಕಾರ ಅಂತರರಾಷ್ಟ್ರೀಯ ವಿಮಾನಗಳನ್ನು ನಿರ್ಬಂಧಿಸುವಂತೆ ಕೇಳಿದಾಗ ನಿಮ್ಮ (ಪ್ರಧಾನಿ ಮೋದಿ) ಆರೋಗ್ಯ ಸಚಿವರು (ಆಗ ಡಾ.ಹರ್ಷವರ್ಧನ್ ಆರೋಗ್ಯ ಸಚಿವರಾಗಿದ್ದರು) ಕೊರೊನಾ ಸೋಂಕು ಹರಡುವುದಿಲ್ಲ ಎಂದು ಪ್ರತಿ‍ಪಾದಿಸಿದ್ದರು’.

‘ಆಗ ಪ್ರಧಾನಿ ಮೋದಿ ‘ನಮಸ್ತೆ ಟ್ರಂಪ್‌’ ಕಾರ್ಯಕ್ರಮ ಆಯೋಜಿಸಿದರು. ಜಗತ್ತಿನ ಅನೇಕ ನಾಯಕರಿಗೆ ಭಾರತಕ್ಕೆ ಆಹ್ವಾನ ನೀಡಲಾಯಿತು. ಪರಿಣಾಮ ದೇಶದ ವಿವಿಧ ಭಾಗಗಳಿಗೆ ಕೋವಿಡ್‌ ಹರಡಿತು’ ಎಂದು ಮಲಿಕ್‌ ಕುಟುಕಿದ್ದಾರೆ.

‘ದೇಶದಲ್ಲಿ ಕೋವಿಡ್‌ ಹರಡಿರುವುದಕ್ಕೆ ಪ್ರಧಾನಿ ಮೋದಿಯೇ ಜವಾಬ್ದಾರರು’ ಎಂದೂ ಮಲಿಕ್‌ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT