ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸ್ನೇಹಿ ಜೀವನಶೈಲಿ: ತಾಪಮಾನ ಬದಲಾವಣೆ ಸಮಾವೇಶದ ಮುಖ್ಯ ಧ್ಯೇಯ

Last Updated 6 ಆಗಸ್ಟ್ 2022, 11:20 IST
ಅಕ್ಷರ ಗಾತ್ರ

ನವದೆಹಲಿ: ತಾಪಮಾನ ಬದಲಾವಣೆ ಕುರಿತು ಈಜಿಪ್ಟ್‌ನಲ್ಲಿ ನಡೆಯಲಿರುವ ‘ಸಿಒಪಿ 27’ ಸಮಾವೇಶಕ್ಕೆ, ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿರುವ ಜಾಗತಿಕ ಪರಿಕ್ರಮ ‘ಪರಿಸರಕ್ಕಾಗಿ ಜೀವನಶೈಲಿ (ಲೈಫ್)‘ ಮುಖ್ಯ ಧ್ಯೇಯವಾಗಿರಲಿದೆ ಎಂದು ಕೇಂದ್ರ ಪರಿಸರ ಸಚಿವಾಲಯವು ತಿಳಿಸಿದೆ.

ಪ್ರಧಾನಿ ಮೋದಿ ಅವರು ಸಾಮೂಹಿಕ ಅಭಿಯಾನಕ್ಕಾಗಿ ‘ಲೈಫ್‌‘ ಪದ ಬಳಸಬಹುದು ಎಂದು ಕಳೆದ ನವೆಂಬರ್‌ನಲ್ಲಿ ಗ್ಲಾಸ್ಗೊದಲ್ಲಿ ನಡೆದಿದ್ದ ಸಮಾವೇಶದಲ್ಲಿ ಪ್ರಸ್ತಾವ ಮಂಡಿಸಿದ್ದರು. ಅದರ ತರುವಾಯ ‘ಲೈಫ್‌’ (ಲೈಫ್‌ಸ್ಟೈಲ್‌ ಫಾರ್ ದ ಎನ್‌ವಿರಾನ್‌ಮೆಂಟ್) ಅಭಿಯಾನವನ್ನು ಆರಂಭಿಸಿದ್ದರು.

ಭೂಮಿಗೆ ಧಕ್ಕೆಯಾಗದ ಜೀವನಶೈಲಿ ರೂಪಿಸಿಕೊಳ್ಳಬೇಕು ಎಂಬುದು ಲೈಫ್‌ನ ಚಿಂತನೆ. ಪರಿಸರ ಸ್ನೇಹಿಯಾದ ಜೀವನಶೈಲಿ ಅನುಸರಿಸಲು ಜನರಿಗೆ ಪ್ರೋತ್ಸಾಹಿಸುವುದು ಇದರ ಗುರಿಯಾಗಿತ್ತು ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT