ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ವಿವರ ಘೋಷಿಸಿದ ಮೋದಿ: ₹26.13 ಲಕ್ಷದಷ್ಟು ಏರಿಕೆ, ಗಾಂಧಿನಗರದ ಭೂಮಿ ದಾನ

Last Updated 9 ಆಗಸ್ಟ್ 2022, 10:29 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಸ್ತಿ ವಿವರ ಬಹಿರಂಗವಾಗಿದೆ. ಅವರ ಬಳಿ 2.23 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿ ಇದ್ದು, ಇದರಲ್ಲಿ ಬಹುಪಾಲು ಬ್ಯಾಂಕ್ ಠೇವಣಿಯೇ ಆಗಿದೆ. ಗುಜರಾತ್‌ನ ಗಾಂಧಿನಗರದಲ್ಲಿದ್ದ ಅವರ ಪಾಲಿನ ಭೂಮಿಯನ್ನು ದಾನ ಮಾಡಿರುವುದರಿಂದ, ಮೋದಿ ಅವರ ಬಳಿ ಯಾವುದೇ ಸ್ಥಿರಾಸ್ಥಿ ಇಲ್ಲ ಎಂಬುದು ಗೊತ್ತಾಗಿದೆ.

ಅವರು ಯಾವುದೇ ಬಾಂಡ್, ಷೇರು ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿಲ್ಲ. ವಾಹನವನ್ನೂ ಹೊಂದಿಲ್ಲ. ಆದರೆ 1.73 ಲಕ್ಷ ರೂಪಾಯಿ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ ಎಂಬುದು ಮಾರ್ಚ್‌ 31ರಂದು ನವೀಕರಿಸಿದ ಈ ವರ್ಷದ ಅವರ ಆಸ್ತಿ ವಿವರಗಳಲ್ಲಿ ಉಲ್ಲೇಖಿಸಲಾಗಿದೆ.

ಮೋದಿಯವರ ಚರಾಸ್ತಿಯು ಒಂದು ವರ್ಷದಲ್ಲಿ ₹26.13 ಲಕ್ಷದಷ್ಟು ಏರಿಕೆಯಾಗಿದೆ. ವರ್ಷದ ಹಿಂದೆ ಮೋದಿ ಅವರ ಬಳಿ ₹1.1 ಕೋಟಿ ಮೌಲ್ಯದ ಸ್ಥಿರಾಸ್ತಿ ಇತ್ತು. ಈಗ ಅವರ ಬಳಿ ಯಾವುದೇ ಸ್ಥಿರಾಸ್ತಿ ಇಲ್ಲ.

2022ರ ಮಾರ್ಚ್ 31ರ ಹೊತ್ತಿಗೆ ಅವರ ಆಸ್ತಿಯ ಒಟ್ಟು ಮೌಲ್ಯ ₹2,23,82,504 ಆಗಿದೆ. ಅವರ ಆಸ್ತಿ ವಿವರನ್ನು ಪ್ರಧಾನ ಮಂತ್ರಿ ಕಾರ್ಯಾಲಯದ ವೆಬ್‌ಸೈಟ್‌ನಲ್ಲಿ ಅಪ್ಲೋಡ್‌ ಮಾಡಲಾಗಿದೆ.

ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಕ್ಟೋಬರ್ 2002 ರಲ್ಲಿ ಮೋದಿ ಅವರು ವಸತಿ ನಿವೇಶನ ಖರೀದಿಸಿದ್ದರು. ಅದರಲ್ಲಿ ಮೂವರು ಪಾಲುದಾರರಿದ್ದರು. ಸರ್ವೆ ಸಂಖ್ಯೆ 401/ಎ ನಲ್ಲಿ ಇದ್ದ ಆ ಭೂಮಿಯನ್ನು ದಾನ ಮಾಡಲಾಗಿದೆ. ಹೀಗಾಗಿ ಅದರ ಮೇಲೆ ಮೋದಿ ಅವರ ಮಾಲೀಕತ್ವ ಇಲ್ಲ ಎಂದು ತಿಳಿಸಲಾಗಿದೆ.

ಮಾರ್ಚ್ 31, 2022 ವರೆಗಿನ ಮಾಹಿತಿಯಂತೆ, ಪ್ರಧಾನ ಮಂತ್ರಿಯವರ ಬಳಿ ₹35,250 ನಗದು, ₹1,89,305 ಮೌಲ್ಯದ ಜೀವ ವಿಮಾ ಪಾಲಿಸಿ, ಅಂಚೆ ಕಚೇರಿಯ ರಾಷ್ಟ್ರೀಯ ಉಳಿತಾಯ ಯೋಜನೆಯಲ್ಲಿ ₹9,05,105 ಇದೆ.

ಪ್ರಧಾನ ಮಂತ್ರಿಯವರ ಸಂಪುಟದ ಸಹೋದ್ಯೋಗಿಯಾದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಬಳಿ ₹2.54 ಕೋಟಿ ಮೌಲ್ಯದ ಚರ ಮತ್ತು ₹2.97 ಕೋಟಿ ಮೌಲ್ಯದ ಸ್ಥಿರ ಆಸ್ತಿ ಇದೆ.

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT