ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸರ್ಕಾರ ದೇಶದ ಆರ್ಥಿಕತೆಯನ್ನು ನಾಶ ಮಾಡಿದೆ: ರಾಹುಲ್ ಗಾಂಧಿ

Last Updated 16 ಮೇ 2022, 9:19 IST
ಅಕ್ಷರ ಗಾತ್ರ

ಜೈಪುರ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರ ಹಿಂದಿನ ಯುಪಿಎ ಸರ್ಕಾರ ಸಶಕ್ತಗೊಳಿಸಿದ್ದ ದೇಶದ ಆರ್ಥಿಕತೆಯನ್ನು ನಾಶ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ರಾಜಸ್ಥಾನದ ಬನ್ಸ್‌ವಾರಾದಲ್ಲಿ ರ್‍ಯಾಲಿಯೊಂದರಲ್ಲಿ ಮಾತನಾಡಿದ ಅವರು, ಮೋದಿ ಎರಡು ಹಿಂದೂಸ್ತಾನವನ್ನು ನಿರ್ಮಿಸಲು ಬಯಸುತ್ತಿದ್ದಾರೆ. ಈ ಪೈಕಿ ಒಂದು ಇಬ್ಬರು ಮೂವರು ಕೈಗಾರಿಕೋದ್ಯಮಿಗಳದ್ದು. ಮತ್ತೊಂದು ದಲಿತರು, ರೈತರು, ಬಡವರು ಮತ್ತು ಹಿಂದುಳಿದವರದ್ದು. ಆದರೆ ಕಾಂಗ್ರೆಸ್ ಒಂದೇ ಹಿಂದೂಸ್ತಾನವನ್ನು ಬಯಸುತ್ತದೆ ಎಂದು ಹೇಳಿದ್ದಾರೆ.

‘ಬಿಜೆಪಿ ಸರ್ಕಾರ ನಮ್ಮ ಆರ್ಥಿಕತೆಯ ಮೇಲೆ ದಾಳಿ ಮಾಡಿದೆ. ಪ್ರಧಾನಿ ನೋಟು ರದ್ದು ಮಾಡಿದರು, ಜಿಎಸ್‌ಟಿಯನ್ನು ತಪ್ಪಾಗಿ ಅನುಷ್ಠಾನ ಮಾಡಿದರು. ಇವುಗಳಿಂದಾಗಿ ಆರ್ಥಿಕತೆ ನಾಶವಾಗಿದೆ. ಯುಪಿಎ ಸರ್ಕಾರ ದೇಶದ ಆರ್ಥಿಕತೆಯನ್ನು ಸಶಕ್ತಗೊಳಿಸಲು ಪ್ರಯತ್ನಿಸಿದ್ದರೆ ಮೋದಿ ಸರ್ಕಾರ ಹಾನಿ ಮಾಡಲು ಯತ್ನಿಸುತ್ತಿದೆ’ ಎಂದು ರಾಹುಲ್ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT