ಬುಧವಾರ, ಮೇ 25, 2022
22 °C

ಜವಾಹರ್‌ಲಾಲ್‌ ನೆಹರೂ ಜನ್ಮದಿನ: ಪ್ರಧಾನಿ ಮೋದಿ, ಕಾಂಗ್ರೆಸ್‌ನಿಂದ ನಮನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಅವರ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಗೌರವ ಸಮರ್ಪಿಸಿದರು.

ಕಾಂಗ್ರೆಸ್‌ನ ಮುಂದಾಳು ನೆಹರೂ ಅವರು ದೇಶದ ಪ್ರಧಾನಿಯಾಗಿ ಸುದೀರ್ಘ ಅವಧಿಯವರೆಗೂ ಸೇವೆ ಸಲ್ಲಿಸಿದರು. ನೆಹರೂ ಅವರು ಹುಟ್ಟಿದ ವರ್ಷ 1889.

'ಪಂಡಿತ್‌ ಜವಾಹರ್‌ಲಾಲ್‌ ನೆಹರೂ ಅವರ ಜನ್ಮದಿನಾಚರಣೆಯ ದಿನದಂದು ಅವರಿಗೆ ನಮನಗಳು' ಎಂದು ಪ್ರಧಾನಿ ಮೋದಿ ಟ್ವೀಟಿಸಿದ್ದಾರೆ.

ಕಾಂಗ್ರೆಸ್‌ನ ಹಲವು ಮುಖಂಡರು ನೆಹರೂ ಅವರನ್ನು ನೆನಪಿಸುವ ಸಂದೇಶಗಳನ್ನು ಹಂಚಿಕೊಂಡು ಗೌರವ ಸೂಚಿಸಿದ್ದಾರೆ. 'ಆಧುನಿಕ ಭಾರತಕ್ಕೆ ಅಡಿಗಲ್ಲು ಹಾಕಿದ ದಾರ್ಶನಿಕ' ಎಂದು ಕಾಂಗ್ರೆಸ್‌ ಪಕ್ಷವು ಬಣ್ಣಿಸಿದೆ.

ನವದೆಹಲಿಯ ಶಾಂತಿ ವನದಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಬೆಳಿಗ್ಗೆ ಪುಷ್ಪ ನಮನ ಸಲ್ಲಿಸಿದರು.

'ನಮ್ಮ ಸ್ವಾತಂತ್ರ್ಯ ಹೋರಾಟದ ನಾಯಕ, ಆಧುನಿಕ ಭಾರತಕ್ಕೆ ಅಡಿಗಲ್ಲು ಹಾಕಿಕೊಟ್ಟ ದಾರ್ಶನಿಕ, ಭಾರತದ ಹಿತಾಸಕ್ತಿಯ ರಕ್ಷಣೆಗಾಗಿ ನಿರ್ಭಿತಿಯಿಂದ ಮುನ್ನಡೆದ ರಾಷ್ಟ್ರೀಯವಾದಿ, ತಲೆಮಾರುಗಳ ಯೋಚನೆಗಳನ್ನು ಬದಲಿಸಿದ ಸ್ಫೂರ್ತಿದಾಯಕ ವ್ಯಕ್ತಿ, ಭಾರತ ಮಾತೆಯ ಸುಪುತ್ರ' ಎಂದು ಕಾಂಗ್ರೆಸ್‌ ನಮನ ಸಲ್ಲಿಸಿದೆ.

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಟ್ವೀಟಿಸಿ, ಸತ್ಯ, ಒಗ್ಗಟ್ಟು ಮತ್ತು ಶಾಂತಿಗೆ ಪ್ರಾಮುಖ್ಯತೆ ನೀಡಿದವರು ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು