ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಫ್ ಸಂಸ್ಥಾಪನಾ ದಿನ: ವಾಯುಪಡೆಯ ಪರಾಕ್ರಮ ಕೊಂಡಾಡಿದ ನರೇಂದ್ರ ಮೋದಿ

Last Updated 8 ಅಕ್ಟೋಬರ್ 2020, 5:49 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ವಾಯುಪಡೆಯ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಐಎಎಫ್‌ಗೆ ಶುಭ ಕೋರಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಾಯುಪಡೆಯ‌ ಯೋಧರ ಪರಾಕ್ರಮವನ್ನು ಕೊಂಡಾಡಿದ್ದಾರೆ.

‘ಐಎಎಫ್‌ ಯೋಧರು ಭಾರತದ ವಾಯುಗಡಿಯನ್ನು ಕಾಯುವುದಷ್ಟೇ ಅಲ್ಲದೆ ಬಿಕ್ಕಟ್ಟಿನ ಸಮಯದಲ್ಲಿ ಮಾನವೀಯ ಸೇವೆ ಸಲ್ಲಿಸುವಲ್ಲೂ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಅವರ ಧೈರ್ಯ, ಪರಾಕ್ರಮ ಹಾಗೂ ಅರ್ಪಣಾಭಾವವು ಎಲ್ಲರಿಗೂ ಸ್ಫೂರ್ತಿಯಾಗಿದೆ’ ಎಂದು ಮೋದಿ ಗುರುವಾರ ಟ್ವೀಟ್‌ ಮಾಡಿದ್ದಾರೆ.

‘1932ರಲ್ಲಿ ಐಎಎಫ್‌ ಸ್ಥಾಪನೆಯಾಗಿದ್ದಾಗ ಆರು ಪೈಲಟ್‌ಗಳು ಹಾಗೂ 19 ಯೋಧರಷ್ಟೇ ಇದ್ದರು. ನಂತರ ಹಂತ ಹಂತವಾಗಿ ಬೆಳೆದ ಐಎಎಫ್‌ 21ನೇ ಶತಮಾನದ ಅತ್ಯಂತ ಬಲಿಷ್ಠ ಪಡೆಗಳಲ್ಲೊಂದಾಗಿ ರೂಪುಗೊಂಡಿದೆ’ ಎಂದು ಅವರು ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT