ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ಬದುಕು, ಚಿಂತನೆಗಳಿಂದ ಬಹಳಷ್ಟು ಕಲಿಯುವುದಿದೆ: ಪ್ರಧಾನಿ ಮೋದಿ

Last Updated 2 ಅಕ್ಟೋಬರ್ 2020, 3:17 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ರಾಜ್ ಘಾಟ್‌ನಲ್ಲಿ ನಮನ ಸಲ್ಲಿಸಿದ್ದಾರೆ.

'ಗಾಂಧಿ ಜಯಂತಿಯಂದು ಪ್ರೀತಿಯ ಬಾಪು ಅವರಿಗೆ ನಮ್ಮ ನಮನಗಳು. ಅವರ ಬದುಕು ಮತ್ತು ಶ್ರೇಷ್ಠ ಚಿಂತನೆಗಳಿಂದ ಕಲಿಯುವುದು ಬಹಳಷ್ಟು ಇದೆ. ಸಮೃದ್ಧ ಮತ್ತು ಉದಾತ್ತ ಭಾರತದ ನಿರ್ಮಾಣದಲ್ಲಿ ಬಾಪೂಜಿ ಅವರ ಆದರ್ಶಗಳು ನಮಗೆ ಮಾರ್ಗದರ್ಶನ ನೀಡಲಿ' ಎಂದು ಪ್ರಧಾನಿ ಮೋದಿ ಟ್ವೀಟಿಸಿದ್ದಾರೆ.

ಅಕ್ಟೋಬರ್‌ 2ರಂದು ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಜನ್ಮದಿನವನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. 'ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ವಿನಯವಂತ ಮತ್ತು ದೃಢ ವ್ಯಕ್ತಿಯಾಗಿದ್ದರು. ಸರಳತೆಗೆ ಸ್ಪಷ್ಟ ಉದಾಹರಣೆಯಂತಿದ್ದ ಅವರು ರಾಷ್ಟ್ರದ ಉನ್ನತಕ್ಕಾಗಿ ಶ್ರಮಿಸಿದರು...' ಎಂದು ಪ್ರಧಾನಿ ಮೋದಿ ವಿಡಿಯೊ ಸಹಿತ ಪ್ರಕಟಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಅವರು ಮಹಾತ್ಮ ಗಾಂಧಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರನ್ನು ಸ್ಮರಿಸಿದ್ದಾರೆ. 'ಗಾಂಧೀಜಿ ಅವರ ಬದುಕಿನಿಂದ ಬಹಳಷ್ಟು ಸಿಗುತ್ತದೆ, ನಾವು ಅದರಿಂದ ಕಲಿಯಲು ಮುಂದಾದರೆ, ಮುಖ್ಯವಾಗಿ ಸಾಂಕ್ರಾಮಿಕದ ಸಮಯದಲ್ಲಿಯೂ ಕಲಿಯುವುದಿದೆ. ಪ್ಲೇಗ್‌ ಎಲ್ಲೆಡೆ ಹರಡಿದಾಗ ಅವರು ಸ್ವತಃ ಆರೋಗ್ಯ ಕಾಳಜಿ ಮತ್ತು ಶುಚಿಗೊಳಿಸುವ ಕಾರ್ಯಗಳಲ್ಲಿ ತೊಡಗಿದರು; ಅದು ಅವರ ನಿಸ್ವಾರ್ಥ ಸೇವೆಯನ್ನು ಹೇಳುತ್ತದೆ' ಎಂದು ಟ್ವೀಟ್‌ ಮಾಡಿದ್ದಾರೆ.

'ದೇಶದ ಸುಪುತ್ರ, ಅತ್ಯಂತ ಸಮರ್ಪಣೆಯಿಂದ ಅವರು ರಾಷ್ಟ್ರ ಸೇವೆ ಮಾಡಿದರು. ಹಸಿರು ಕ್ರಾಂತಿಯಲ್ಲಿ ಅವರು ವಹಿಸಿದ ಪಾತ್ರ, ಕ್ಷೀರ ಕ್ರಾಂತಿ ಮತ್ತು ಯುದ್ಧ ಸಮಯದಲ್ಲಿ ಅವರು ವಹಿಸಿದ ನಾಯಕತ್ವವು ರಾಷ್ಟ್ರಕ್ಕೆ ಪ್ರೇರಣೆಯಾಗಿದೆ' ಎಂದಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಮಹಾತ್ಮ ಗಾಂಧಿ( #MahatmaGandhi) ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿ (#LalBahadurShastriJayanti) ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್‌ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT