ಭಾನುವಾರ, ಸೆಪ್ಟೆಂಬರ್ 26, 2021
21 °C

Video: ನವಿಲಿನೊಂದಿಗೆ ಪ್ರಧಾನಿ ನಲಿವಿನ ಕ್ಷಣ!

ಪಿಟಿಐ Updated:

ಅಕ್ಷರ ಗಾತ್ರ : | |

ನವಿಲಿನೊಂದಿಗೆ ಪ್ರಧಾನಿ ನಲಿವಿನ ಕ್ಷಣ

ನವದೆಹಲಿ: ನವಿಲಿನ ಜೊತೆಗಿನ ಒಡನಾಟದ ದೃಶ್ಯಾವಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

ತಮ್ಮ ಬಿಡುವಿನ ಸಂದರ್ಭದಲ್ಲಿ ಮೋದಿ ಅವರು ನವಿಲಿನ ಜೊತೆ ಕಾಲ ಕಳೆಯುವ ಈ ವಿಡಿಯೊ ಜನಮೆಚ್ಚುಗೆಯನ್ನು ಗಳಿಸಿದೆ. 

ಹಿಂದಿ ಕವಿತೆಯ ಜೊತೆಗೆ ‘ಅಮೂಲ್ಯ ಕ್ಷಣಗಳು’ ಎಂದು ಶೀರ್ಷಿಗೆ ನೀಡಿ 1.47 ನಿಮಿಷದ ಈ ವಿಡಿಯೊವನ್ನು ಇನ್‌ಸ್ಟಾಗ್ರಾಂ, ಟ್ವಿಟರ್‌ನಲ್ಲಿ ಅವರು ಹಂಚಿಕೊಂಡಿದ್ದಾರೆ. 

ಪ್ರಧಾನಿ ಮೋದಿ ಅವರು ಹಿಡಿದಿದ್ದ ತಟ್ಟೆಯಿಂದ ರಾಷ್ಟ್ರಪಕ್ಷಿ ಧಾನ್ಯವನ್ನು ಹೆಕ್ಕಿ ತಿನ್ನುತ್ತಿದೆ. ಮನೆ ಒಳಗೆ ಮತ್ತು ಹೊರಗೆ ನವಿಲು ಆಹಾರ ತಿನ್ನುವ ಜೊತೆಗೆ ವಾಕಿಂಗ್‌ ಮಾಡುವ ವೇಳೆ ನವಿಲು ಗರಿಬಿಚ್ಚಿ ಹೆಜ್ಜೆ ಹಾಕುವ ದೃಶ್ಯ ಈ ವಿಡಿಯೊದಲ್ಲಿದೆ. ಅಲ್ಲದೆ ಪ್ರಧಾನಿ ಪುಸ್ತಕ ಓದುತ್ತಿದ್ದಾಗ ಅವರ ಪಕ್ಕದಲ್ಲೇ ನವಿಲು ಆಹಾರ ತಿನ್ನುತ್ತಿರುವ ದೃಶ್ಯವೂ ಇದೆ. 

ಪಕ್ಷಿಗಳು ಗೂಡು ಕಟ್ಟಲು ಅನುಕೂಲವಾಗುವಂತಹ ವ್ಯವಸ್ಥೆಯನ್ನು ಮೋದಿ ನಿವಾಸದಲ್ಲಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು