ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಕ್ಸೊ: ಯುವಕರ ಒಪ್ಪಿತ ಪ್ರೇಮ ಸಂಬಂಧದ ಅಪರಾಧೀಕರಣ ಸಲ್ಲ- ದೆಹಲಿ ಹೈಕೋರ್ಟ್‌

Last Updated 14 ನವೆಂಬರ್ 2022, 14:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ (ಪೋಕ್ಸೊ) ‌ಮುಖ್ಯ ಉದ್ದೇಶ ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವುದೇ ಹೊರತು ಯುವಕರ ಒಪ್ಪಿತ ಪ್ರೇಮ ಸಂಬಂಧವನ್ನು ಅಪರಾಧವಾಗಿಸುವುದಲ್ಲ’ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಬಾಲಕನಿಗೆ ಜಾಮೀನು ಮಂಜೂರು ಮಾಡುವ ವೇಳೆ ನ್ಯಾಯಾಲಯವು ಈ ರೀತಿ ಅಭಿಪ್ರಾಯಪಟ್ಟಿದೆ.

‘ಈ ಪ್ರಕರಣದಲ್ಲಿ 17 ವರ್ಷದ ಹುಡುಗಿಯು ಸ್ವಇಚ್ಛೆಯಿಂದಲೇ ಹುಡುಗನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಾಳೆ. ಇಬ್ಬರ ನಡುವೆ ಒಪ್ಪಿತವಾದ ಲೈಂಗಿಕ ಕ್ರಿಯೆ ಏರ್ಪಟ್ಟಿದೆ ಎಂಬುದು ಹುಡುಗಿಯ ಹೇಳಿಕೆಗಳಿಂದಲೇ ಸ್ಪಷ್ಟವಾಗಿದೆ’ ಎಂದು ನ್ಯಾಯಾಲಯವು ಹೇಳಿದೆ.

‘ಪೋಕ್ಸೊ ಕಾಯ್ದೆಯನ್ನು 18 ವರ್ಷಕ್ಕಿಂತ ಒಳಗಿರುವ ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಣೆ ಮಾಡುವುದಕ್ಕಾಗಿ ರೂಪಿಸಲಾಗಿದೆ ಹೊರತು ಒಪ್ಪಿತ ಸಂಬಂಧಗಳನ್ನು ಅಪರಾಧಗೊಳಿಸುವುದಕ್ಕೆ ಅಲ್ಲ. ಯಾವುದೇ ಸಂಬಂಧಗಳ ಸ್ವರೂಪವನ್ನು ಪ್ರತಿ ಪ್ರಕರಣ ವಾಸ್ತವಾಂಶ ಮತ್ತು ಸಂದರ್ಭಗಳ ಹಿನ್ನೆಲೆಯಲ್ಲಿ ನೋಡಬೇಕು’ ಎಂದು ನ್ಯಾಯಾಮೂರ್ತಿ ಜಸ್ಮೀತ್‌ ಸಿಂಗ್‌ ತಮ್ಮ ಜಾಮೀನು ಆದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ಇಂಥ ಪ್ರಕರಣಗಳಲ್ಲಿ ಜಾಮೀನು ನೀಡುವಾಗ ಪ್ರೀತಿಯ ಕಾರಣಕ್ಕಾಗಿ ಹುಟ್ಟಿಕೊಂಡ ಒಪ್ಪಿತ ಸಂಬಂಧಗಳ ಬಗ್ಗೆ ಗಮನ ಹರಿಸಬೇಕು. ಈ ಪ್ರಕರಣಕ್ಕೆ ಸಂಬಂಧಿಸಿ ಹೇಳುವುದಾದರೆ, ಸಂತ್ರಸ್ತೆಯು ಬಾಲಕಿಯಾಗಿರುವುದರಿಂದ ಈ ಪ್ರೇಮ ಸಂಬಂಧಕ್ಕೆ ಆಕೆ ನೀಡಿದ ಒ‍ಪ್ಪಿಗೆಯು ಕಾನೂನಿನಡಿ ಸಿಂಧು ಆಗುವುದಿಲ್ಲ. ಆದರೆ, ಬಾಲಕಿಯ ಹೇಳಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ ಹುಡುಗನನ್ನು ಜೈಲಿಗೆ ಕಳುಹಿಸಿದ್ದರೆ ಅದು ನ್ಯಾಯವನ್ನು ಅಪಹಾಸ್ಯ ಮಾಡಿದಂತೆ ಆಗುತ್ತಿತ್ತು’ ಎಂದು ನ್ಯಾಯಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT