ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 900 ಕೋಟಿ ವಂಚನೆ: ಚೀನಾ ಪ್ರಜೆ ಸೇರಿ 10 ಮಂದಿ ಬಂಧನ

Last Updated 13 ಅಕ್ಟೋಬರ್ 2022, 6:43 IST
ಅಕ್ಷರ ಗಾತ್ರ

ಹೈದರಾಬಾದ್: ಹೂಡಿಕೆಗೆ ಸಂಬಂಧಿಸಿದ ಆ್ಯಪ್‌ಗಳನ್ನು ಬಳಸಿ ₹ 903 ಕೋಟಿ ವಂಚಿಸಿದ ಪ್ರಕರಣವನ್ನು ಪತ್ತೆ ಹಚ್ಚಿ, ಚೀನಾ ಪ್ರಜೆ ಸೇರಿ 10 ಜನರನ್ನು ಬಂಧಿಸಲಾಗಿದೆ ಎಂದು ಹೈದರಾಬಾದ್‌ ನಗರ ಪೊಲೀಸರು ಬುಧವಾರ ಹೇಳಿದ್ದಾರೆ.

‘ಹೈದರಾಬಾದ್‌ ನಗರ ಸೈಬರ್‌ ಕ್ರೈಂ ವಿಭಾಗವು ಈ ಹೂಡಿಕೆ ವಂಚನೆ ಪ್ರಕರಣವನ್ನು ಭೇದಿಸಿದೆ’ ಎಂದು ಪೊಲೀಸ್‌ ಆಯುಕ್ತ ಸಿ.ವಿ.ಆನಂದ್‌ ಸುದ್ದಿಗಾರರಿಗೆ ತಿಳಿಸಿದರು.

‘ಪ್ರಕರಣ ಗಂಭೀರ ಸ್ವರೂಪದ್ದಾಗಿದೆ. ಹಾಗಾಗಿ, ನಗರ ಪೊಲೀಸರು ಇ.ಡಿ ಮತ್ತು ಡಿಆರ್‌ಐನ ಸಮನ್ವಯದೊಂದಿಗೆ ತನಿಖೆ ನಡೆಸುವರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT