ಗುರುವಾರ , ಜನವರಿ 28, 2021
27 °C

ಶ್ರೀನಗರ: ಹಿಮಪಾತ,ವಿಮಾನ ಸಂಚಾರ ಸ್ಥಗಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಶ್ರೀನಗರದಲ್ಲಿ ಸೋಮವಾರವೂ ಹಿಮಪಾತ ಮುಂದುವರಿದಿದ್ದು, ಇದರಿಂದಾಗಿ ಸತತ ಎರಡನೇ ದಿನ ಶ್ರೀನಗರದ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ಅಡಚಣೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ರನ್‌ವೇಯಿಂದ ಹಿಮವನ್ನು ತೆರವುಗೊಳಿಸಲಾಗಿದೆ. ವಾಯುಮಾರ್ಗವು ಸ್ಷಷ್ಟವಾಗಿ ಗೋಚರಿಸದ ಕಾರಣ ವಿಮಾನ ಹಾರಾಟ ಸೇವೆ ರದ್ದುಪಡಿಸಲಾಯಿತು’ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದರು.

‘ಹವಾಮಾನದಲ್ಲಿ ಸುಧಾರಣೆ ಕಂಡುಬಂದಲ್ಲಿ ವಿಮಾನಸೇವೆ ಪುನರಾರಂಭ ಆಗಲಿದೆ’ ಎಂದು ಹೇಳಿದರು. ಭಾನುವಾರವೂ ಹಿಮ, ಮಳೆಯಿಂದಾಗಿ ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿತ್ತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು