ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕು; ಎನ್‌ಇಇಟಿ–ಜೆಇಇ ಪರೀಕ್ಷೆ ಮುಂದೂಡಲು ಸೋನು ಸೂದ್ ಮನವಿ

Last Updated 26 ಆಗಸ್ಟ್ 2020, 9:24 IST
ಅಕ್ಷರ ಗಾತ್ರ

ಕೊರೊನಾ – ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಸಾವಿರಾರು ವಲಸೆ ಕಾರ್ಮಿಕರಿಗೆ ನೆರವಾಗುವ ಮೂಲಕ ಮಾನವೀತೆ ಮೆರೆದಿದ್ದ ಬಾಲಿವುಡ್‌ ನಟ ಸೋನುಸೂದ್‌ ಈಗ ಎನ್‌ಇಇಟಿ – ಜೆಇಇ ಪ್ರವೇಶ ಪರೀಕ್ಷೆಗಳನ್ನು ಮುಂದೂಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಈ ಮೂಲಕ ರಾಷ್ಟ್ರಮಟ್ಟದಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ನೆರವಿಗೂ ಅವರು ಧಾವಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ’ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಈ ಸಮಯದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ನಾವೆಲ್ಲ ಗಮನ ಹರಿಸಬೇಕು.ಹಾಗಾಗಿ ಈ ಪ್ರವೇಶ ಪರೀಕ್ಷೆಗಳನ್ನು ಮುಂದೂಡಬೇಕೆಂದು’ ಮನವಿ ಮಾಡಿದ್ದಾರೆ. ಸೋನು ಅವರ ಈ ಟ್ವೀಟ್ ವೈರಲ್ ಆಗಿದೆ. ಅನೇಕರು ಈ ಟ್ವೀಟ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಕೆಲವರು ಮರು ಟ್ವೀಟ್‌ ಮಾಡುವ ಮೂಲಕ, ಪರೀಕ್ಷೆ ಮುಂದೂಡಬೇಕೆಂಬ ಸೋನುಸೂದ್ ಅವರ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

'ಸುಮಾರು 26 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.ಕೊರೊನಾ ಸೋಂಕು ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆ ಬರೆಯುವಂತೆ ಸಾಧ್ಯವಿಲ್ಲ. ನಾನೂ ಒಬ್ಬ ಎಂಜಿನಿಯರ್‌. ಪರೀಕ್ಷೆ ಬರೆಯುತ್ತಿರುವ ಎಷ್ಟೋ ಮಕ್ಕಳು ದೊಡ್ಡದೊಡ್ಡ ಎಂಜಿನಿಯರ್‌ ಆಗುವ ಕನಸು ಕಂಡಿರುತ್ತಾರೆ. ಹಾಗಾಗಿ, ಇಂಥ ವೇಳೆಯಲ್ಲಿ ನಾವೆಲ್ಲ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಲ್ಲಬೇಕು. ಸರ್ಕಾರ ಈ ಪರೀಕ್ಷೆಗಳನ್ನು ನವೆಂಬರ್ – ಡಿಸೆಂಬರ್ ತಿಂಗಳವರೆಗೆ ಮುಂದೂಡಬೇಕು. ವಿದ್ಯಾರ್ಥಿಗಳು ಮಾನಸಿಕರಾಗಿ ಸಿದ್ಧರಾದ ಮೇಲೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ’ ಎಂದು ನಟ ಸೋನುಸೂದ್ ತಿಳಿಸಿದ್ದಾರೆಂದು ಎನ್‌ಡಿಟಿವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT