ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ನ ಮೊದಲ 12 ದಿನಗಳಲ್ಲಿ ವಿದ್ಯುತ್‌ ಬಳಕೆ ಶೇ 16.5ರಷ್ಟು ಹೆಚ್ಚಳ

Last Updated 14 ಮಾರ್ಚ್ 2021, 6:05 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ವರ್ಷದ ಮಾರ್ಚ್‌ ತಿಂಗಳ ಮೊದಲ 12 ದಿನಗಳ ಅವಧಿಗೆ ಹೋಲಿಸಿದರೆ, ಈ ವರ್ಷದ ಇದೇ ಅವಧಿಯಲ್ಲಿ ದೇಶದಲ್ಲಿ ವಿದ್ಯುತ್‌ ಬಳಕೆ ಪ್ರಮಾಣದಲ್ಲಿ ಶೇ 16.5ರಷ್ಟು ಹೆಚ್ಚಳವಾಗಿದೆ ಎಂದು ಇಂಧನ ಸಚಿವಾಲಯ ತಿಳಿಸಿದೆ.

ವಿದ್ಯುತ್‌ ಬಳಕೆಯಲ್ಲಿ ಹೆಚ್ಚಳವಾಗುತ್ತಿರುವುದು ದೇಶದ ಆರ್ಥಿಕತೆ ಪುನಶ್ಚೇತನದತ್ತ ಸಾಗಿರುವುದನ್ನು ತೋರುತ್ತದೆ ಎಂದೂ ಸಚಿವಾಲಯ ಹೇಳಿದೆ.

ಕಳೆದ ವರ್ಷದ ಮಾರ್ಚ್‌ 1ರಿಂದ 12ರವರೆಗೆ 40.92 ಶತಕೋಟಿ ಯುನಿಟ್‌ಗಳಷ್ಟು ವಿದ್ಯುತ್‌ ಬಳಕೆ ದಾಖಲಾಗಿತ್ತು. ಈ ವರ್ಷದ ಮಾರ್ಚ್‌ 12ರ ವರೆಗಿನ ಅವಧಿಯಲ್ಲಿನ ಬಳಕೆ ಪ್ರಮಾಣ 47.67 ಶತಕೋಟಿ ಯುನಿಟ್‌ ಎಂದು ತಿಳಿಸಿದೆ.

ಒಂದು ದಿನದಲ್ಲಿನ ಗರಿಷ್ಠ ವಿದ್ಯುತ್‌ ಬೇಡಿಕೆ ಪ್ರಮಾಣದಲ್ಲಿಯೂ ಹೆಚ್ಚಳ ಕಂಡುಬಂದಿದೆ. ಕಳೆದ ವರ್ಷ ಮಾರ್ಚ್‌ 3ರಂದು ಗರಿಷ್ಠ ವಿದ್ಯುತ್‌ ಬೇಡಿಕೆ 170.16 ಗಿಗಾ ವಾಟ್‌ ದಾಖಲಾಗಿತ್ತು.

ಈ ವರ್ಷ ಮಾರ್ಚ್‌ 11ರಂದು ಈ ಪ್ರಮಾಣ 186.03 ಗಿಗಾವಾಟ್‌ ನಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಗರಿಷ್ಠ ವಿದ್ಯುತ್‌ ಬೇಡಿಕೆಯಲ್ಲಿ ಶೇ 9.3ರಷ್ಟು ಹೆಚ್ಚಳವಾದಂತಾಗಿದೆ ಎಂದೂ ಸಚಿವಾಲಯ ತಿಳಿಸಿದೆ.

ಕಳೆದ ವರ್ಷ್‌ ಮಾರ್ಚ್‌ ತಿಂಗಳಲ್ಲಿನ ವಿದ್ಯುತ್‌ ಬಳಕೆ ಪ್ರಮಾಣ 98.95 ಶತಕೋಟಿ ಯುನಿಟ್‌ ಇತ್ತು. ಈ ವರ್ಷದ ಮಾರ್ಚ್‌ನಲ್ಲಿನ ಬಳಕೆ ಇದಕ್ಕಿಂತಲೂ ಹೆಚ್ಚಾಗಿರಲಿದೆ ಎಂದೂ ಸಚಿವಾಲಯದ ಅಧಿಕಾರಿಗಳು ಅಂದಾಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT