ಶನಿವಾರ, ಮಾರ್ಚ್ 25, 2023
29 °C

ಪಂಜಾಬ್‌ನಲ್ಲಿ ಯೂನಿಟ್‌ ವಿದ್ಯುತ್‌ಗೆ ₹3 ಕಡಿತ, ತಕ್ಷಣದಿಂದ ಜಾರಿ

ಪಿಟಿಐ Updated:

ಅಕ್ಷರ ಗಾತ್ರ : | |

ಚಂಡೀಗಡ: ಗೃಹಬಳಕೆ ಸಂಪರ್ಕಗಳಿಗೆ ಅನ್ವಯಿಸಿ ವಿದ್ಯುತ್‌ ದರವನ್ನು ಯೂನಿಟ್‌ಗೆ ₹ 3 ಇಳಿಸಲು ಪಂಜಾಬ್‌ನ ಸಚಿವ ಸಂಪುಟ ತೀರ್ಮಾನಿಸಿದೆ. ವಿಧಾನಸಭೆಗೆ ಚುನಾವಣೆ ಕೆಲವೇ ತಿಂಗಳಿರುವಾಗ ಈ ತೀರ್ಮಾನ ಹೊರಬಿದ್ದಿದೆ.

ಸಚಿವ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್ ಚನ್ನಿ ಈ ನಿರ್ಧಾರ ಪ್ರಕಟಿಸಿದರು. ವಿದ್ಯುತ್ ದರವನ್ನು ಯೂನಿಟ್‌ಗೆ ₹ 3 ಇಳಿಸುವುದರಿಂದ ಬೊಕ್ಕಸಕ್ಕೆ ವಾರ್ಷಿಕ  ₹ 3,316 ಕೋಟಿ ಹೊರೆ ಬೀಳಲಿದೆ.

ಜನತೆಗೆ ಇದು ದೀಪಾವಳಿ ಕೊಡುಗೆ. ತಕ್ಷಣದಿಂದ ಜಾರಿಗೆ ಬರುವಂತೆ ಈ ತೀರ್ಮಾನ ಜಾರಿಗೆ ಬರಲಿದೆ. ಈಚೆಗೆ ನಡೆಸಿದ್ದ ಸಮೀಕ್ಷೆಯಲ್ಲಿ ಗುಣಮಟ್ಟದ, ಅಗ್ಗದ ದರದ ವಿದ್ಯುತ್ ಸಿಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು