ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನ ಮಂತ್ರಿ ಜನ್ ಧನ್ ಲೂಟಿ ಯೋಜನೆ: ರಾಹುಲ್ ವ್ಯಂಗ್ಯ

Last Updated 4 ಏಪ್ರಿಲ್ 2022, 9:40 IST
ಅಕ್ಷರ ಗಾತ್ರ

ನವದೆಹಲಿ: ಇಂಧನ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಪ್ರಧಾನ ಮಂತ್ರಿ ಜನ್ ಧನ್ ಲೂಟಿ ಯೋಜನೆ' ಎಂದು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯ ಅಂಕಿಅಂಶವನ್ನು ಉಲ್ಲೇಖಿಸಿ ಗ್ರಾಫಿಕ್ಸ್ ಬಿಡುಗಡೆ ಮಾಡಿದ್ದಾರೆ.

ಯುಪಿಎ ಸರ್ಕಾರದ ಹಾಗೂ ಈಗಿನ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಇಂಧನ ಬೆಲೆ ಹೋಲಿಕೆ ಮಾಡಿದ್ದಾರೆ.

2014ರಲ್ಲಿ ಹಾಗೂ ಇಂದಿನ ಸ್ಕೂಟರ್, ಬೈಕ್, ಕಾರು, ಟ್ರ್ಯಾಕ್ಟರ್ ಹಾಗೂ ಟ್ರಕ್‌ಗಳ ಫುಲ್ ಟ್ಯಾಂಕ್ ಇಂಧನ ಬೆಲೆ ತುಲನೆ ಮಾಡಲಾಗಿದೆ. ಜೊತೆಗೆ ಅಂದು ಹಾಗೂ ಇಂದಿನ ಕಚ್ಚಾ ತೈಲ ಬೆಲೆಯನ್ನು ಉಲ್ಲೇಖಿಸಲಾಗಿದೆ.

ಈ ಮೂಲಕ ಇಂಧನ ಬೆಲೆಗೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಯನ್ನು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಫುಲ್ ಟ್ಯಾಂಕ್ ಇಂಧನದ ವೆಚ್ಚ (ಮೇ 2014 vs ಈಗಿನ ಬೆಲೆ):

ಸ್ಕೂಟರ್/ಬೈಕ್:
2014: ₹714
ಈಗಿನ ಬೆಲೆ: ₹1038
ವ್ಯತ್ಯಾಸ: ₹324 ಏರಿಕೆ

ಕಾರು:
2014: ₹2856
ಈಗಿನ ಬೆಲೆ: ₹4152
ವ್ಯತ್ಯಾಸ: ₹1296 ಏರಿಕೆ

ಟ್ರ್ಯಾಕ್ಟರ್:
2014: ₹2749
ಈಗಿನ ಬೆಲೆ: ₹4563
ವ್ಯತ್ಯಾಸ: ₹1814 ಏರಿಕೆ

ಟ್ರಕ್:
2014: ₹11456
ಈಗಿನ ಬೆಲೆ: ₹19014
ವ್ಯತ್ಯಾಸ: ₹7558 ಏರಿಕೆ

ಕಚ್ಚಾ ತೈಲ ಬೆಲೆ:
ಮೇ 26, 2014: 108.05 ಅಮೆರಿಕನ್ ಡಾಲರ್
ಏಪ್ರಿಲ್ 04, 2022: 99.42 ಅಮೆರಿಕನ್ ಡಾಲರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT