ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರದ ಹೆದ್ದಾರಿ ನೋಡಿ, 90ರ ದಶಕದ ಜಂಗಲ್‌ ರಾಜ್‌ನಂತಿದೆ- ಪ್ರಶಾಂತ್‌ ಕಿಶೋರ್‌

Last Updated 23 ಜೂನ್ 2022, 12:58 IST
ಅಕ್ಷರ ಗಾತ್ರ

ಪಟ್ನಾ: ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಅವರು, ಅಲ್ಲಿನ ರಾಷ್ಟ್ರೀಯ ಹೆದ್ದಾರಿಯೊಂದರ ಭೀಕರ ಹೊಂಡಗುಂಡಿಗಳಿರುವ ಫೋಟೊ, ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. '1990ರ ಜಂಗಲ್‌ ರಾಜ್‌ ನೆನಪಾಗುತ್ತಿದೆ' ಎಂದು ವ್ಯಂಗ್ಯವಾಡಿದ್ದಾರೆ.

ಇದು ಬಿಹಾರದ ಮಧುಬನಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ದೃಶ್ಯಗಳು ಎಂದು ಪ್ರಶಾಂತ್‌ ಕಿಶೋರ್‌ ವಿವರಿಸಿದ್ದಾರೆ.

ಟ್ವೀಟ್‌ನಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರನ್ನು ಉಲ್ಲೇಖಿಸಿರುವ ಪ್ರಶಾಂತ್‌, ಇತ್ತೀಚೆಗೆ ನಿತೀಶ್‌ ಜೀ ಅವರು ಕಾರ್ಯಕ್ರಮವೊಂದರಲ್ಲಿ ರಸ್ತೆ ನಿರ್ಮಾಣ ಇಲಾಖೆಯ ಅಧಿಕಾರಿಗಳಿಗೆ ರಾಜ್ಯದ ರಸ್ತೆಗಳ ಉತ್ತಮ ಪರಿಸ್ಥಿತಿ ಬಗ್ಗೆ ಜನರಿಗೆ ತಿಳಿಸುವಂತೆ ಹೇಳಿದ್ದರು' ಎಂದಿದ್ದಾರೆ.

ಬಿಹಾರದಲ್ಲಿ ಪರಿವರ್ತನೆ ತರಲು ಹಾಗೂ ರಾಜ್ಯದಲ್ಲಿ ರಾಜಕೀಯವಾಗಿ ಪರ್ಯಾಯವನ್ನು ನೀಡುವ ಉದ್ದೇಶದಿಂದ ಪ್ರಶಾಂತ್‌ ಕಿಶೋರ್‌ ಅವರು 'ಜನ್‌ ಸುರಾಜ್‌' ವೇದಿಕೆ ಮೂಲಕ ಸಕ್ರಿಯ ರಾಜಕಾರಣಕ್ಕೆ ದುಮುಕಿದ್ದಾರೆ.

'1990ರ ಜಂಗಲ್‌ ರಾಜ್‌' ಎಂಬುದು ಬಿಹಾರವನ್ನು 15 ವರ್ಷಗಳ ಕಾಲ ಆಳಿದ ಲಾಲು ಪ್ರಸಾದ್‌ ಮತ್ತು ಅವರ ಪತ್ನಿ ರಾಬ್ರಿ ದೇವಿ ಅವರ ಕುರಿತಾಗಿದೆ. ಅರಾಜಕತೆ ಮತ್ತು ಕೆಟ್ಟ ರಸ್ತೆಗಳ ಬಗ್ಗೆ ಆರ್‌ಜೆಡಿ ತೀವ್ರ ಟೀಕೆಗೆ ಒಳಗಾಗಿತ್ತು. 2005ರಲ್ಲಿ ಆರ್‌ಜೆಡಿಯನ್ನು ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಸೋಲಿಸಿ ಅಧಿಕಾರಕ್ಕೆ ಬಂತು.

2015ರ ವಿಧಾನಸಭೆ ಚುನಾವಣೆಯಲ್ಲಿ ಲಾಲು ಪ್ರಸಾದ್‌ ಮತ್ತು ನಿತೀಶ್‌ ಕುಮಾರ್‌ ಮೈತ್ರಿಕೂಟವು ಜಯ ಗಳಿಸಲು ಕಿಶೋರ್‌ ಪ್ರಮುಖ ಪಾತ್ರವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT