ಬುಧವಾರ, ಜೂನ್ 16, 2021
23 °C

‘ಭಾರತೀಯ ರೂಪಾಂತರ'ದ ಬಗ್ಗೆ ರಾಷ್ಟ್ರಪತಿ, ಪ್ರಧಾನಿ ಭಯಭೀತರಾಗಿದ್ದಾರೆ: ಕಮಲ್ ನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೈಪುರ: ಕೊರೊನಾ ವೈರಸ್‌ನ ‘ಭಾರತೀಯ ರೂಪಾಂತರ’ ಪದವನ್ನು ಬಳಸುವ ಅಥವಾ ಸೂಚಿಸುವ ಯಾವುದೇ ಕಂಟೆಂಟ್ ಅನ್ನು ತಮ್ಮ ವೇದಿಕೆಯಿಂದ ತಕ್ಷಣ ತೆಗೆದುಹಾಕುವಂತೆ ಸರ್ಕಾರ ಸಾಮಾಜಿಕ ಮಾಧ್ಯಮ ಕಂಪನಿಗಳನ್ನು ಕೇಳಿದ ಒಂದು ದಿನದ ನಂತರ, ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅವರು ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವ್ಯಂಗ್ಯ ಮಾಡಿದ್ದಾರೆ.

ಕೋವಿಡ್ -19 ರ 'ಭಾರತೀಯ ರೂಪಾಂತರ'ದ ಬಗ್ಗೆ ರಾಷ್ಟ್ರಪತಿ ಮತ್ತು ಪ್ರಧಾನಿ ಭಯಭೀತರಾಗಿದ್ದಾರೆ ಎಂದು ಕಮಲ್ ನಾಥ್ ಆರೋಪಿಸಿದ್ದಾರೆ.

‘ಚೀನಾದಿಂದ ಬಂದ ಕೊರೊನಾ ಈಗ ಭಾರತೀಯ ರೂಪಾಂತರ ಕೊರೊನಾವಾಗಿದೆ. ಇಂದು, ಭಾರತದ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳು ಕೋವಿಡ್ -19ರ ಭಾರತೀಯ ರೂಪಾಂತರದ ಬಗ್ಗೆ ಭಯಪಡುತ್ತಿದ್ದಾರೆ. ಇದು ಯಾವ ಟೂಲ್‌ಕಿಟ್ ಆಗಿದೆ? ನಮ್ಮ ವಿಜ್ಞಾನಿಗಳು ಇದನ್ನು 'ಭಾರತೀಯ ರೂಪಾಂತರ' ಎಂದು ಕರೆಯುತ್ತಿದ್ದಾರೆ. ಆದರೆ, ಬಿಜೆಪಿ ಸಲಹೆಗಾರರು ಮಾತ್ರ ಒಪ್ಪಿಕೊಳ್ಳುತ್ತಿಲ್ಲ’ ಎಂದು ಕಮಲ್ ನಾಥ್ ವ್ಯಂಗ್ಯವಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಳಂಕ ಹಚ್ಚಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಅಧಿಕೃತವಾಗಿ ಬಿ .1.167 ರೂಪಾಂತರ ಎಂದು ಕರೆಯಲ್ಪಡುವ ಕೋವಿಡ್ -19 ರ ‘ಡಬಲ್ ರೂಪಾಂತರಿತ’ ವೈರಸ್ ಅನ್ನು ‘ಭಾರತೀಯ ರೂಪಾಂತರ’ ಎಂದು ಉಲ್ಲೇಖಿಸುವುದನ್ನು ತಡೆಯುವ ಪ್ರಯತ್ನ ಹೆಚ್ಚಾಗುತ್ತಿದೆ.

‘ಭಾರತೀಯ ರೂಪಾಂತರ’ ಎಂಬ ಪದದ ಬಳಕೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿದೆ. ಈ ಹಿಂದೆ ‘ವುಹಾನ್ ವೈರಸ್’ ಎಂದು ಬಳಸಲಾಗುತ್ತಿದ್ದ ಧಾಟಿಯಲ್ಲೇ ‘ಭಾರತೀಯ ರೂಪಾಂತರ’ ಎಂದು ಟ್ವಿಟರ್‌ನಲ್ಲಿ ಕೆಲವರು ಬಳಸಲು ಆರಂಭಿಸಿದ್ದಾರೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು