ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40 ಮಂದಿಗೆ ಜೀವನ್‌ ರಕ್ಷಾ ಪದಕ

ಕರ್ನಾಟಕ ಎಸ್‌.ಎಂ. ರಫಿಗೆ ಪ್ರಶಸ್ತಿ
Last Updated 25 ಜನವರಿ 2021, 13:19 IST
ಅಕ್ಷರ ಗಾತ್ರ

ನವದೆಹಲಿ: ಜನರ ಜೀವ ಉಳಿಸಿ ಸಾಹಸ ಮೆರೆದು ಮೆಚ್ಚುಗೆಗೆ ಪಾತ್ರರಾದ ಕರ್ನಾಟಕದ ಎಸ್‌.ಎಂ. ರಫಿ ಸೇರಿದಂತೆ 40 ಮಂದಿಗೆ ಜೀವನ್‌ ರಕ್ಷಾ ಪದಕ ಪ್ರಶಸ್ತಿ ಘೋಷಿಸಲಾಗಿದೆ.

ಈ ಪಟ್ಟಿಯಲ್ಲಿ ಕೇರಳದ ಮುಹಮ್ಮದ್‌ ಮುಹಸೀನ್‌ ಅವರ ಹೆಸರು ಸಹ ಇದೆ. ಇವರಿಗೆ ಮರಣೋತ್ತರವಾಗಿ ಸರ್ವೋತ್ತಮ ಜೀವನ್‌ ರಕ್ಷಾ ಪದಕ ಪ್ರಶಸ್ತಿ ನೀಡಲಾಗುತ್ತಿದೆ. ಉತ್ತಮ ಜೀವನ್‌ ರಕ್ಷಾ ಪದಕವನ್ನು 8 ವ್ಯಕ್ತಿಗಳಿಗೆ ಮತ್ತು ಜೀವನ್‌ ರಕ್ಷಾ ಪದಕವನ್ನು ಇತರ 31 ಮಂದಿಗೆ ನೀಡಲು ಉದ್ದೇಶಿಸಲಾಗಿದೆ ಎಂದು ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಒಟ್ಟು 40 ಮಂದಿಯ ಪಟ್ಟಿಗೆ ಅನುಮೋದನೆ ನೀಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಜೀವನ್‌ ರಕ್ಷಾ ಪದಕದ ಸರಣಿ ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ನೀಡಲಾಗುತ್ತಿದೆ. ಸರ್ವೋತ್ತಮ ಜೀವನ್‌ ರಕ್ಷಾ ಪದಕ್‌, ಉತ್ತಮ ಜೀವನ್‌ ರಕ್ಷಾ ಪದಕ್‌ ಮತ್ತು ಜೀವನ್‌ ರಕ್ಷಾ ಪದಕ ಎಂದು ವಿಭಜಿಸಲಾಗಿದೆ.

ಕರ್ನಾಟಕದ ಎಸ್‌.ಎಂ. ರಫಿ ಜೀವನ್‌ ರಕ್ಷಾ ಪದಕ ಪಡೆದವರಲ್ಲಿ ಸೇರಿದ್ದಾರೆ. ಜೀವ ಉಳಿಸುವ ಕಾರ್ಯದಲ್ಲಿ ತೊಡಗಿದ ಎಲ್ಲ ವರ್ಗಗಳ ವ್ಯಕ್ತಿಗಳು ಈ ಪ್ರಶಸ್ತಿ ಪಡೆಯಲು ಅರ್ಹರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT