ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನಾದರೂ ಜನರ ಸೇವೆಗೆ ಮುಂದಾಗಿ: ಪ್ರಧಾನಿ ಮೋದಿಗೆ ಕಾಂಗ್ರೆಸ್‌ ಆಗ್ರಹ

Last Updated 10 ಮೇ 2021, 13:24 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಪ್ರಮಾದಗಳಿಗಾಗಿ ಪ್ರಾಯಶ್ಚಿತ್ತ ಪಡಬೇಕು ಮತ್ತು ಇನ್ನಾದರೂ ತಮ್ಮ ವೈಯಕ್ತಿಕ ಕಾರ್ಯಸೂಚಿ ಜಾರಿಗೆ ಒತ್ತು ನೀಡುವ ಬದಲಿಗೆ ಜನರ ಸೇವೆಗೆ ಮುಂದಾಗಬೇಕು‘ ಎಂದು ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿಯು (ಸಿಡಬ್ಲ್ಯೂಸಿ) ಸೋಮವಾರ ಆಗ್ರಹಪಡಿಸಿದೆ.

ಕಾಂಗ್ರೆಸ್‌ ಪಕ್ಷದ ಅತ್ಯುನ್ನತ ನೀತಿ ನಿರೂಪಣಾ ಸಮಿತಿಯಾದ ಸಿಡಬ್ಲ್ಯೂಸಿ ಈ ಕುರಿತು ನಿರ್ಣಯ ಅಂಗೀಕರಿಸಿದ್ದು, ಕೋವಿಡ್‌ ಪ್ರಕರಣಗಳು ಮತ್ತು ಸಾವಿನ ಪ್ರಕರಣಗಳ ಅಂಕಿ ಅಂಶದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದು, ಸರ್ಕಾರ ವಾಸ್ತವ ಸಾವಿನ ಪ್ರಕರಣಗಳನ್ನು ಮರೆಮಾಚುತ್ತಿದೆ ಎಂದು ಆರೋಪಿಸಿದೆ.

ಸಮಸ್ಯೆಗೆ ಪರಿಹಾರ ಇರುವುದು ಅದರನ್ನು ಎದುರಿಸುವಲ್ಲಿ, ವಸ್ತುಸ್ಥಿತಿಯನ್ನು ಮರೆಮಾಚುವುದರಲ್ಲಿ ಅಲ್ಲ ಎಂದು ಹೇಳಿದೆ. ಕೋವಿಡ್‌ ಲಸಿಕೆ ಅಭಿಯಾನ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಿಡಬ್ಲ್ಯೂಸಿ, ಔಷಧದ ಕೊರತೆಯಿದೆ ಇನ್ನೊಂದೆಡೆ ದರ ನೀತಿಯೂ ತಾರತಮ್ಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT