ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ದರ ಏರಿಕೆಯೂ ಪ್ರಧಾನಿ ದಿನಚರಿಯ ಪಟ್ಟಿಗೆ- ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

Last Updated 30 ಮಾರ್ಚ್ 2022, 10:45 IST
ಅಕ್ಷರ ಗಾತ್ರ

ನವದೆಹಲಿ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ(ಎಲ್‌ಪಿಜಿ ಸಿಲಿಂಡರ್) ದರ ಏರಿಕೆ, ರೈತರು ಅಸಹಾಯಕರಾಗುವಂತೆ ಮಾಡುವುದು ಹಾಗೂ ಯುವಕರಿಗೆ ಉದ್ಯೋಗದ ಕುರಿತು ಸುಳ್ಳು ಕನಸುಗಳನ್ನು ತೋರಿಸುವುದು ಸೇರಿದಂತೆ ಇನ್ನಿತರ ವಿಚಾರಗಳು ಪ್ರಧಾನಿ ನರೇಂದ್ರ ಮೋದಿ ಅವರ ದಿನಚರಿಯ ಪಟ್ಟಿಯಲ್ಲಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಬುಧವಾರ 'ರೋಜ್‌ಸುಭಾಕೀಬಾತ್' ಎಂಬ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

'ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸಿಲಿಂಡರ್ ದರಗಳನ್ನು ಎಷ್ಟು ಪ್ರಮಾಣದಲ್ಲಿ ಏರಿಸಬೇಕು. ಜನರ ಖರ್ಚುಗಳ ಬಗ್ಗೆ ಚರ್ಚೆಗಳನ್ನು ಹೇಗೆ ನಿಲ್ಲಿಸಬೇಕು. ಯುವಕರಲ್ಲಿ ಹೇಗೆಲ್ಲಾ ಸುಳ್ಳು ಕನಸುಗಳನ್ನು ಬಿತ್ತಬೇಕು. ಸರ್ಕಾರಿ ಸ್ವಾಮ್ಯದ ಯಾವ ಕಂಪನಿಯನ್ನು ಮಾರಾಟ ಮಾಡಬೇಕು ಹಾಗೂ ರೈತರನ್ನು ಹೇಗೆ ಮತ್ತಷ್ಟು ಅಸಹಾಯಕರನ್ನಾಗಿ ಮಾಡಬೇಕು ಎಂಬ ವಿಚಾರಗಳು ಪ್ರಧಾನಿಯವರ ದಿನಚರಿಯ ಪಟ್ಟಿಯಲ್ಲಿವೆ' ಎಂದು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT