ಬುಧವಾರ, ಡಿಸೆಂಬರ್ 2, 2020
17 °C

ಖಾಸಗಿ ಮದರಸಾಗಳನ್ನು ಎಂದಿಗೂ ಮುಚ್ಚಬಾರದು: ಅಸ್ಸಾಂ ವಿಧಾನಸಭೆ ಉಪಾಧ್ಯಕ್ಷ

ಪಿಟಿಐ Updated:

ಅಕ್ಷರ ಗಾತ್ರ : | |

Aminul Haque Laskar

ಗುವಾಹಟಿ: ‘ಖಾಸಗಿ ಮದರಸಾಗಳು ಮುಸಲ್ಮಾನರನ್ನು ಸಕ್ರಿಯರಾಗಿ ಉಳಿಸಿದ್ದು, ಅವುಗಳನ್ನು ಎಂದಿಗೂ ಮುಚ್ಚಬಾರದು’ ಎಂದು ಅಸ್ಸಾಂ ವಿಧಾನಸಭೆಯ ಉಪಾಧ್ಯಕ್ಷ ಅಮಿನುಲ್ ಹಕ್ ಲಸ್ಕರ್ ಪ್ರತಿಪಾದಿಸಿದ್ದಾರೆ.

ಈಚೆಗೆ ಸರ್ಕಾರ ಅಸ್ಸಾಂನಲ್ಲಿ ಇರುವ ಎಲ್ಲ ಮದರಸಾಗಳು ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚಲು ತೀರ್ಮಾನಿಸಿದ್ದು, ಅಧಿಸೂಚನೆಯನ್ನು ಹೊರಡಿಸಿತ್ತು.

‘ಯಾವುದಾದರೂ ಮದರಸಾ ಮುಚ್ಚಲಾಗಿದೆಯೇ? ಎಂದಿಗೂ ಅವುಗಳನ್ನು ಮುಚ್ಚಬಾರರದು. ಅವು ಮಸಲ್ಮಾನರನ್ನು ಸಕ್ರಿಯವಾಗಿ ಇರಿಸಿವೆ’ ಎಂದು ಕ್ಯಾಚರ್ ಜಿಲ್ಲೆಯಲ್ಲಿ ಮದರಸಾ ಸ್ಥಾಪನೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಮೌಲಾನಾ ಮತ್ತು ಖಾಜಿಗಳು ಇಂಥ ಮದರಸಾದಿಂದಲೇ ಬಂದಿದ್ದಾರೆ. ಮಸೀದಿಗಳ ಮೌಲ್ವಿಗಳು ಇಲ್ಲಿ ಕಲಿತಿದ್ದಾರೆ. ಮದರಸಾಗಳನ್ನು ಮುಚ್ಚಿದರೆ ಪ್ರತಿಭಟಿಸಿ. ಕಾಂಗ್ರೆಸ್ ಪ್ರತಿಭಟಿಸಿದರೆ ಅವರಿಗೆ ಕೇವಲ ಸರ್ಕಾರ ನಡೆಸುತ್ತಿರುವ ಮದರಸಾಗಳನ್ನಷ್ಟೇ ಮುಚ್ಚಲಾಗುತ್ತಿದೆ ಎಂದು ತಿಳಿಸಿ ಎಂದು ಉಪಾಧ್ಯಕ್ಷರು ಸಲಹೆ ಮಾಡಿದರು.

ಶಿಕ್ಷಣ ಸಚಿವ ಹಿಮಾಂತಾ ಬಿಸ್ವಶರ್ಮಾ ಅವರು, ಸರ್ಕಾರ ನಡೆಸುತ್ತಿರುವ ಎಲ್ಲ ಮದರಸಾಗಳನನ್ನು ಮುಚ್ಚಲಾಗುತ್ತದೆ. ಜಾತ್ಯತೀತ ವ್ಯವಸ್ಥೆಯಲ್ಲಿ ಸರ್ಕಾರ ಎಂದಿಗೂ ಧರ್ಮದ ಆಧಾರದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ನೆರವು ನೀಡಲಾಗದು’ ಎಂದು ಹೇಳಿದ್ದರು. ಇದಕ್ಕೆ ವಿರೋಧಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು