ಭಾನುವಾರ, ಮೇ 16, 2021
24 °C

ಕೇರಳದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಾಯಂಕುಲಂ(ಕೇರಳ): ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಯ ಪರ ಮಂಗಳವಾರ ರೋಡ್‌ ಶೋ ನಡೆಸಿದರು.

ಕೇರಳದಲ್ಲಿ ಏಪ್ರಿಲ್ 6 ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಿಯಾಂಕಾ ಗಾಂಧಿ ಪ್ರಚಾರ ಕೈಗೊಂಡರು.  ವಾಹನದಲ್ಲಿ ಕುಳಿತಿದ್ದ ಪ್ರಿಯಾಂಕಾ ಅವರು ರಸ್ತೆಯ ಎರಡೂ ಬದಿ ಸಾಲುಗಟ್ಟಿ ನಿಂತಿದ್ದ ಜನಸಮೂಹದತ್ತ ಕೈ ಬೀಸಿದರು. ಮತದಾರರೊಂದಿಗೆ ಕೈಕುಲುಕಿದರು.

ಪ್ರಿಯಾಂಕಾ ಅವರು ಮಂಗಳವಾರ ಕಾಯಂಕುಲಂನ ಕಾಂಗ್ರೆಸ್ ಅಭ್ಯರ್ಥಿ ಅರಿತಾ ಬಾಬು ಅವರೊಂದಿಗೆ ರೋಡ್‌ ಶೋ ನಲ್ಲಿ ಪಾಲ್ಗೊಂಡರು. 26 ವರ್ಷದ ಅರಿತಾ ಬಾಬು ಅವರು, ಕೇರಳ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಅತ್ಯಂತ ಕಿರಿಯ ವಯಸ್ಸಿನವರು. ಈ ಕ್ಷೇತ್ರದಲ್ಲಿ ಅವರಿಗೆ ಪ್ರತಿಸ್ಪರ್ಧಿಗಳಾಗಿ ಸಿಪಿಎಂ ಪಕ್ಷದ ಹಾಲಿ ಶಾಸಕಿ ಯು. ಪ್ರತಿಭಾ ಹರಿ, ಎಲ್‌ಡಿಎಫ್‌ ಮೈತ್ರಿ ಕೂಟದ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ಪ್ರದೀಪ್ ಲಾಲ್‌ ಕಣಕ್ಕಿಳಿದಿದ್ದಾರೆ.

ಪಕ್ಕದಲ್ಲಿರುವ ತಿರುವನಂತಪುರಂ ಜಿಲ್ಲೆಗೆ ತೆರಳುವ ಮೊದಲು ಪ್ರಿಯಾಂಕಾ ಅವರು ಕರುಣಗಪಲ್ಲಿಯಲ್ಲಿ ಎಂಬಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ,  ಕೊಟ್ಟಾರಕಾರ ಮತ್ತು ಕೊಲ್ಲಂನಲ್ಲಿ ರೋಡ್‌ ಶೋ ನಡೆಸಿದರು. ತಿರುವನಂತಪುರಂನ ವೆಂಜರಮೂಡುವಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ನಂತರ ಕರಾವಳಿ ಪೂಂತುರಾ ಸೇರಿದಂತೆ ವಿವಿಧ ಸ್ಥಳಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ. ಕರಾವಳಿಯಲ್ಲಿರುವ ವಲಿಯತುರಾ ಗ್ರಾಮದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು