ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆ: ಶಾ ಹೇಳಿಕೆ ಸುಳ್ಳು ಎಂದ ಪ್ರಿಯಾಂಕಾ

Last Updated 13 ನವೆಂಬರ್ 2021, 8:15 IST
ಅಕ್ಷರ ಗಾತ್ರ

ನವದೆಹಲಿ: ‘ಉತ್ತರಪ್ರದೇಶದಲ್ಲಿ ಮಧ್ಯರಾತ್ರಿಯೂ 16 ವರ್ಷದ ಹುಡುಗಿ ಆಭರಣ ಧರಿಸಿ ಓಡಾಡಬಹುದು ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆ ‘ಶುದ್ಧ ಸುಳ್ಳು’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ರಾಜ್ಯದ ಮಹಿಳೆಯರಿಗೆ ಮಾತ್ರ ಪ್ರತಿದಿನ ತಾವು ಎದುರಿಸಬೇಕಾದ ಸ್ಥಿತಿಯ ಅರಿವಿದೆ ಎಂದು ಶನಿವಾರ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ ಟ್ವೀಟ್ ಮಾಡಿರುವ ಅವರು, ಇದರ ಜೊತೆಗೆ ಕಾನ್ಪುರದಲ್ಲಿ ಮೂರು ಮಹಿಳೆಯರ ಸರಗಳ್ಳತನ ಕುರಿತ ಮಾಧ್ಯಮ ವರದಿಯನ್ನು ಹಂಚಿಕೊಂಡಿದ್ದಾರೆ.

‘ಗೃಹ ಸಚಿವರ ಹೇಳಿಕೆಯನ್ನು ತಳ್ಳಿಹಾಕಿರುವ ಅವರು, ಇದೇ ಕಾರಣಕ್ಕೆ ‘ಹುಡುಗಿ ಇದ್ದೇನೆ, ಹೋರಾಡುತ್ತೇನೆ’ ಎಂಬುದು ಪ್ರಸ್ತುತವಾಗಿದೆ. ರಾಜಕಾರಣದಲ್ಲಿ ಮಹಿಳೆಯರು ಭಾಗಿಯಾಗುವುದು, ಸುರಕ್ಷತೆ ಕುರಿತ ನೀತಿ ರೂಪಿಸುವುದು ಅಗತ್ಯವಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT