ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಜ್ಬೇಕಿಸ್ತಾನದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಕೆಮ್ಮು ಸಿರಪ್‌ ಪ್ರಕರಣ: ಮೂವರ ಬಂಧನ

Last Updated 3 ಮಾರ್ಚ್ 2023, 15:37 IST
ಅಕ್ಷರ ಗಾತ್ರ

ನೊಯಿಡಾ: ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವಿಗೆ ಕಾರಣವಾಗಿದೆ ಎನ್ನಲಾದ ಕೆಮ್ಮಿನ ಸಿರಪ್‌ ತಯಾರಿಸಿರುವ ಇಲ್ಲಿನ ಮ್ಯಾರಿಯೊನ್‌ ಬಯೋಟೆಕ್‌ ಕಂಪನಿಯ ಮೂವರು ಉದ್ಯೋಗಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸಿಡಿಎಸ್‌ಸಿಒ) ಔಷಧ ಪರಿವೀಕ್ಷಕರು ನೀಡಿರುವ ದೂರಿನ ಆಧಾರದಲ್ಲಿ ಕಂಪನಿಯ ಇಬ್ಬರು ನಿರ್ದೇಶಕರೂ ಸೇರಿದಂತೆ ಐವರ ವಿರುದ್ಧ ಗುರುವಾರ ಎಫ್‌ಐಆರ್‌ ದಾಖಲಾಗಿತ್ತು.

ಕೇಂದ್ರ ತನಿಖಾ ತಂಡ ಮತ್ತು ಉತ್ತರಪ್ರದೇಶದ ಅಧಿಕಾರಿಗಳು ಕಂಪನಿ ತಯಾರಿಸಿರುವ ಔಷಧಗಳ ಮಾದರಿಯನ್ನು ಪರಿಶೀಲನೆಗೆ ಕೊಂಡೊಯ್ದಿದ್ದು, ಇವುಗಳಲ್ಲಿ 22 ಮಾದರಿಗಳು ಪ್ರಮಾಣಿತ ಗುಣಮಟ್ಟ ಹೊಂದಿರಲಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

‘ಕಂಪನಿಯ ಉದ್ಯೋಗಿಗಳಾದ ತುಹಿನ್‌ ಭಟ್ಟಾಚಾರ್ಯ, ಅತುಲ್‌ ರಾವತ್‌ ಮತ್ತು ಮೂಲ್‌ ಸಿಂಗ್‌ ಎಂಬುವವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT