ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತಸರದಲ್ಲಿ ಕೇಜ್ರಿವಾಲ್ ರೋಡ್‌ ಶೋ; ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಎಎಪಿ

Last Updated 13 ಮಾರ್ಚ್ 2022, 18:22 IST
ಅಕ್ಷರ ಗಾತ್ರ

ಅಮೃತಸರ: ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಹಾಗೂ ಪಂಜಾಬ್‌ನ ನಿಯೋಜಿತ ಮುಖ್ಯಮಂತ್ರಿ ಭಗವಂತ ಮಾನ್ ಅವರು ಅಮೃತಸರದಲ್ಲಿ ಭಾನುವಾರ ರೋಡ್‌ ಶೋ ನಡೆಸಿ, ಪಕ್ಷದ ಗೆಲುವನ್ನು ಸಂಭ್ರಮಿಸಿದರು. ರಾಜ್ಯದಲ್ಲಿ ಮೊದಲ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತಂದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

117 ಸದಸ್ಯಬಲದ ಪಂಜಾಬ್ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಎಪಿ 92 ಕಡೆಗಳಲ್ಲಿ ಗೆಲುವು ಸಾಧಿಸಿತ್ತು.

ಅಮೃತಸರದ ಕಚಹರಿ ಚೌಕದಿಂದ ರೋಡ್‌ ಶೋಆರಂಭವಾಯಿತು. ತೆರೆದ ವಾಹನದ ಮೇಲೆನಿಂತುಕೊಂಡಿದ್ದ ಕೇಜ್ರಿವಾಲ್ ಹಾಗೂ ಮಾನ್ ಅವರಮೇಲೆ ಎಎಪಿ ಬೆಂಬಲಿಗರು ಹೂಮಳೆ ಗರೆದರು. ಹೊಸದಾಗಿ ಚುನಾಯಿತರಾದ ಶಾಸಕರು ರೋಡ್‌ ಶೋನಲ್ಲಿ ಭಾಗಿಯಾಗಿದ್ದರು.

ರಾಜ್ಯದ ವಿವಿಧ ಭಾಗಗಳಿಂದ ಅಮೃತಸರಕ್ಕೆ ಬಂದಿದ್ದ ಪಕ್ಷದ ಕಾರ್ಯಕರ್ತರು ತ್ರಿವರ್ಣಧ್ವಜ ಹಾಗೂ ಪಕ್ಷದ ಧ್ವಜಗಳನ್ನು ಹಿಡಿದಿದ್ದರು. ‘ಎಎಪಿ ಅಧಿಕಾರಕ್ಕೆ ಬಂದಿರುವುದರಿಂದ ಸಂತೋಷವಾಗಿದೆ. ಪಂಜಾಬ್ ಮತ್ತೆ ಸಮೃದ್ಧವಾಗಲಿದೆ’ ಎಂದು ಫರೀದ್‌ಕೋಟ್‌ನ ಯುವಕ ವಿಶ್ವಾಸ ವ್ಯಕ್ತಪಡಿಸಿದರು.

‘ಸಾಂಪ್ರದಾಯಿಕ ಪಕ್ಷಗಳನ್ನು ಕೈಬಿಟ್ಟಿರುವ ರಾಜ್ಯದ ಮತದಾರರು, ಪಂಜಾಬ್‌ಗೆ ಹೊಸ ದಿಕ್ಕು ತೋರುವ ಭರವಸೆಯಿಂದ ಎಎಪಿಯನ್ನು ಆಯ್ಕೆ ಮಾಡಿದ್ದಾರೆ’ ಎಂದು ಅಮೃತಸರದ ಪಕ್ಷದ ಕಾರ್ಯಕರ್ತರೊಬ್ಬರು ಅಭಿಪ್ರಾಯಪಟ್ಟರು.

ರೋಡ್‌ ಶೋಗೂ ಮುನ್ನ ಅರವಿಂದ್‌ ಕೇಜ್ರಿವಾಲ್ ಹಾಗೂ ಭಗವಂತ ಮಾನ್ ಅವರು ಸ್ವರ್ಣಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಜಲಿಯನ್ ವಾಲಾಬಾಗ್‌ ಸ್ಮಾರಕಕ್ಕೆ ತೆರಳಿ ಹೂಗುಚ್ಛ ಅರ್ಪಿಸಿದರು.

ದುರ್ಗಿಯಾನಾ ಮಂದಿರ ಹಾಗೂ ಶ್ರೀರಾಮ ತೀರ್ಥ ಮಂದಿರಗಳಲ್ಲಿ ಪೂಜೆ ಸಲ್ಲಿಸಿದರು.

ಭಗವಂತ ಮಾನ್ ಅವರು ಮಾರ್ಚ್ 16ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

'ಪಂಜಾಬ್‌ಗೆ ಪ್ರಾಮಾಣಿಕ ಮುಖ್ಯಮಂತ್ರಿ'
ಹಲವು ವರ್ಷಗಳ ಬಳಿಕ ಪಂಜಾಬ್‌ಗೆ ಒಬ್ಬ ಪ್ರಾಮಾಣಿಕ ಮುಖ್ಯಮಂತ್ರಿ ಸಿಕ್ಕಿದ್ದು, ಪಕ್ಷವು ರಾಜ್ಯದಲ್ಲಿ ಪ್ರಾಮಾಣಿಕ ಆಡಳಿತ ನೀಡಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

‘ರಾಜ್ಯದ ಬೊಕ್ಕಸದ ಒಂದೊಂದು ಪೈಸೆಯನ್ನೂ ರಾಜ್ಯದ ಜನರಿಗಾಗಿ ಖರ್ಚು ಮಾಡಲಾಗುವುದು. ಚುನಾವಣೆಯಲ್ಲಿ ನಾವು ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ’ ಎಂದು ಕೇಜ್ರಿವಾಲ್ ಭರವಸೆ ನೀಡಿದರು. ಮಾನ್ ಅವರಷ್ಟೇ ಅಲ್ಲ, ಪಂಜಾಬ್‌ನ ಪ್ರತಿಯೊಬ್ಬ ವ್ಯಕ್ತಿಯೂ ಮುಖ್ಯಮಂತ್ರಿಯೇ ಎಂದು ನುಡಿದರು.

ಪಕ್ಷದ ಯಾವುದೇ ನಾಯಕ ಅಥವಾ ಶಾಸಕ ಅಕ್ರಮದಲ್ಲಿ ತೊಡಗಿದ್ದರೆ, ಅಂತಹವರನ್ನು ಕಂಬಿ ಹಿಂದೆ ಕಳುಹಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT