ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಅಕ್ರಮ ಗಣಿಗಾರಿಕೆ: ₹10 ಕೋಟಿ ಪಡೆದುದನ್ನು ಒಪ್ಪಿಕೊಂಡ ಚನ್ನಿ ಸಂಬಂಧಿ -ಇ.ಡಿ

Last Updated 8 ಫೆಬ್ರುವರಿ 2022, 2:43 IST
ಅಕ್ಷರ ಗಾತ್ರ

ನವದೆಹಲಿ: ₹10 ಕೋಟಿ ನಗದು ಪಡೆದುದನ್ನು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಸಂಬಂಧಿ ಭೂಪಿಂದರ್ ಅಲಿಯಾಸ್ ಹನಿ ಒಪ್ಪಿ ಕೊಂಡಿದ್ದಾರೆ. ಮರಳುಅಕ್ರಮ ಗಣಿಗಾರಿಕೆಗೆಅನುಕೂಲವಾಗುವಂತೆ ಮತ್ತು ಅಧಿಕಾರಿಗಳ ವರ್ಗಾವಣೆ ಅಥವಾ ಪೋಸ್ಟಿಂಗ್ ಬದಲಿಗೆ ನೆರವು ನೀಡುವುದಕ್ಕೆ ಪ್ರತಿಯಾಗಿ ಈ ಹಣ ಸ್ವೀಕರಿಸಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿ ಗಳು ಸೋಮವಾರ ತಿಳಿಸಿದ್ದಾರೆ.

ಪಂಜಾಬ್‌ನಲ್ಲಿ ಮರಳುಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದ ಹಣಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ ತನಿಖಾ ಸಂಸ್ಥೆಯು ಹನಿ ಅವರನ್ನು ಫೆಬ್ರುವರಿ 3ರಂದು ವಶಕ್ಕೆ ತೆಗೆದುಕೊಂಡಿತ್ತು. ಅವರು ಮಂಗಳವಾರದವರೆಗೆ ಇ.ಡಿ ವಶದಲ್ಲಿ ಇರಲಿದ್ದಾರೆ.ಜನವರಿ 18ರಂದು ಹನಿ ಮತ್ತು ಇತರರ ವಿರುದ್ಧ ಇ.ಡಿ. ದಾಳಿ ನಡೆಸಿ ಸುಮಾರು ₹7.9 ಕೋಟಿ ನಗದು ವಶಪಡಿಸಿಕೊಂಡಿತ್ತು. ಸಂದೀಪ್ ಕುಮಾರ್ ಎಂಬಾತನಿಂದ ₹2 ಕೋಟಿ ಜಪ್ತಿ ಮಾಡಿತ್ತು.

ಕುದ್ರತ್‌ದೀಪ್ ಸಿಂಗ್, ಭೂಪಿಂದರ್ ಸಿಂಗ್, ಅವರ ತಂದೆ ಸಂತೋಖ್ ಸಿಂಗ್ ಮತ್ತು ಸಂದೀಪ್ ಕುಮಾರ್ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ವಶಪಡಿಸಿಕೊಂಡ ₹10 ಕೋಟಿ ಹಣ ಭೂಪಿಂದರ್ ಸಿಂಗ್ ಅವರಿಗೆ ಸೇರಿದ್ದು ಎಂದು ದೃಢಪಟ್ಟಿದೆ ಎಂದು ಇ.ಡಿ. ತಿಳಿಸಿದೆ.

‘ಕೆಲವು ದಾಖಲೆಗಳೊಂದಿಗೆ ಫೆಬ್ರುವರಿ 3ರಂದು ತನಿಖಾ ಸಂಸ್ಥೆಯ ಮುಂದೆ ವೈಯಕ್ತಿಕವಾಗಿ ಹಾಜರಾಗಲು ಹನಿಗೆ ಸಮನ್ಸ್ ನೀಡಲಾಗಿತ್ತು.ಈ ವೇಳೆ ಪ್ರತಿಕ್ರಿಯಿಸಿದ್ದ ಅವರು, ಗಣಿಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡ ಗಿಸಿಕೊಂಡಿರುವುದಾಗಿ ತಿಳಿಸಿದ್ದರು. ಆದರೆ, ತಮ್ಮ ಮೇಲೆ ಮಾಡಲಾಗಿರುವ ಆರೋಪಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು’ ಎಂದು ಇ.ಡಿ. ಹೇಳಿದೆ.

ಹನಿ, ಕುದ್ರತ್‌ದೀಪ್ ಸಿಂಗ್ ಮತ್ತು ಸಂದೀಪ್ ಕುಮಾರ್ ಅವರು ಪ್ರೊವೈಡರ್ಸ್ ಓವರ್‌ಸೀಸ್ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯ ನಿರ್ದೇಶಕರು ಎಂದು ಹೇಳಲಾಗಿದೆ. ಜಾರಿ ನಿರ್ದೇಶನಾಲಯವು ಕಳೆದ ತಿಂಗಳು ಈ ಕಂಪನಿಯಲ್ಲಿ ಶೋಧ ನಡೆ ಸಿತ್ತು.

ಫೆ.20ರಂದು ಪಂಜಾಬ್‌ನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಚನ್ನಿ ಅವರನ್ನು ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ.2018ರಲ್ಲಿ ಪಂಜಾಬ್ ಪೋಲೀಸರು ಗಣಿ ಗಾರಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡ ನಂತರ, ಕಳೆದ ವರ್ಷದ ನವೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ದಾಖಲಿಸಿ ಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT