ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ಗೆ ಕಾಂಗ್ರೆಸ್‌ನ 13 ಅಂಶಗಳ ಕಾರ್ಯಸೂಚಿ: ಸೋನಿಯಾ ಗಾಂಧಿಗೆ ಸಿಧು ಪತ್ರ

Last Updated 17 ಅಕ್ಟೋಬರ್ 2021, 8:01 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪ್ರಚಾರ ಕಾರ್ಯಗಳ ಸಂಬಂಧ ಪಂಜಾಬ್‌ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ಅಕ್ಟೋಬರ್‌ 15ರಂದೇ ಸಿಧು ಪತ್ರ ಬರೆದಿದ್ದು, ಇಂದು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ರಾಹುಲ್‌ ಗಾಂಧಿ ಮತ್ತು ಕೆ.ಸಿ.ವೇಣುಗೋಪಾಲ್‌ ಅವರನ್ನು ಭೇಟಿಯಾಗಿ ಪಂಜಾಬ್‌ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಹಿಂಪಡೆದ ಸಿಧು, 'ಎಲ್ಲವೂ ಬಗೆಹರಿದಿದೆ' ಎಂದು ಪ್ರತಿಕ್ರಿಯಿಸಿದ್ದರು. ಅದರ ಬೆನ್ನಲ್ಲೇ ಸೋನಿಯಾ ಗಾಂಧಿ ಅವರಿಗೆ ಪತ್ರ ರವಾನಿಸಿದ್ದಾರೆ.

ಮುಂದಿನ ವರ್ಷ ಪಂಜಾಬ್‌ ವಿಧಾನಸಭೆಗೆ ಚುನಾವಣೆ ನಿಗದಿಯಾಗಿದ್ದು, ಹದಿಮೂರು ಅಂಶಗಳನ್ನು ಒಳಗೊಂಡ ಕಾರ್ಯಸೂಚಿಯನ್ನು ಪ್ರಸ್ತುತ ಪಡಿಸಲು ಸಭೆ ಸೇರುವ ಕುರಿತು ಸೋನಿಯಾ ಅವರಿಗೆ ಸಿಧು ಪತ್ರ ಬರೆದಿದ್ದಾರೆ.

ಧರ್ಮ ಅಪವಿತ್ರಗೊಳಿಸಿದ ಪ್ರಕರಣಗಳಲ್ಲಿ ನ್ಯಾಯ, ಪಂಜಾಬ್‌ನ ಡ್ರಗ್ಸ್‌ ಕಿರುಕುಳ, ಕೃಷಿ ವಿಚಾರಗಳು, ಉದ್ಯೋಗ ಅವಕಾಶಗಳು, ಮರಳು ಗಣಿಗಾರಿಕೆ ಹಾಗೂ ಹಿಂದುಳಿದ ವರ್ಗಗಳ ಉನ್ನತಿ ಕುರಿತ ಅಂಶಗಳು ಪಕ್ಷದ ಪ್ರಚಾರ ಕಾರ್ಯಸೂಚಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT