ಸೋಮವಾರ, ಮಾರ್ಚ್ 27, 2023
22 °C

36 ಶಾಲಾ ಮುಖ್ಯಸ್ಥರನ್ನು ತರಬೇತಿಗೆ ಸಿಂಗಾಪುರಕ್ಕೆ ಕಳುಹಿಸಿದ ಪಂಜಾಬ್‌ ಸರ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ಚಂಡೀಗಢ: ಪಂಜಾಬ್‌ನ 36 ಸರ್ಕಾರಿ ಶಾಲೆಗಳ ಶಿಕ್ಷಕರು ಫೆಬ್ರವರಿ 4 ರಂದು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಂಗಾಪುರಕ್ಕೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ತಿಳಿಸಿದ್ದಾರೆ.

ಕಳೆದ ವರ್ಷದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವುದಾಗಿ ಎಎಪಿ(ಆಮ್ ಆದ್ಮಿ ಪಕ್ಷ) ಭರವಸೆ ನೀಡಿತ್ತು ಎಂದು ಹೇಳಿದರು. 

ಶಿಕ್ಷಕರು, ಶಿಕ್ಷಣದ ಮೂಲಕ  ಭವಿಷ್ಯದ  ರಾಷ್ಟ್ರ ನಿರ್ಮಾತೃಗಳಾಗಿದ್ದಾರೆ. ಆದ ಕಾರಣ  ಗುಣಮಟ್ಟದ ತರಬೇತಿಯನ್ನು ಶಿಕ್ಷಕರು ಪಡೆದುಕೊಳ್ಳುವುದರಿಂದ ಬೋಧನಾ ಕೌಶಲ್ಯವನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ತಿಳಿಸಿದ್ದಾರೆ.

ಘೋಷಣೆಯ ಭಾಗವಾಗಿ 36 ಪ್ರಾಂಶುಪಾಲರು ತರಬೇತಿ ಕಾರ್ಯಕ್ರಮಕ್ಕಾಗಿ  ಸಿಂಗಾಪುರಕ್ಕೆ ಪ್ರಯಾಣಿಸುತ್ತಾರೆ. ಶಿಕ್ಷಕರು ಫೆಬ್ರುವರಿ 6 ರಿಂದ 10ರವರೆಗೆ ಸಿಂಗಾಪುರದಲ್ಲಿ ವೃತ್ತಿಪರ ಶಿಕ್ಷಕರ ತರಬೇತಿ ಸೆಮಿನಾರ್‌ನಲ್ಲಿ ಭಾಗವಹಿಸಲಿದ್ದಾರೆ ಎಂದರು.

ರಾಜ್ಯದಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಈ ತರಬೇತಿಯ ಪ್ರಯೋಜನ ಪಡೆಯುತ್ತಾರೆ. ಏಕೆಂದರೆ ಈ ಪ್ರಾಂಶುಪಾಲರು ತಮ್ಮ ಅನುಭವವನ್ನು ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇದರಿಂದ "ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಶಿಕ್ಷಕರ ಪರಿಣತಿ ಮತ್ತು ವೃತ್ತಿಪರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ" ಎಂದು ಮಾನ್ ಹೇಳಿದರು.

ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಈ ಹೆಜ್ಜೆ ಒಂದು ಮೈಲಿಗಲ್ಲು  ಸಾಧಿಸಲಿದೆ. ಈ ರೀತಿಯ ಪ್ರಯತ್ನಗಳೊಂದಿಗೆ, ಪಂಜಾಬ್ ಶೀಘ್ರದಲ್ಲೇ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರಲಿದೆ ಎಂದು ಮಾನ್ ತಿಳಿಸಿದ್ದಾರೆ.

ಇದನ್ನು ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.